ಹಳಿ ತಪ್ಪಿದ ರೈಲು: ಇಬ್ಬರು ಮೃತ್ಯು, ಹಲವರಿಗೆ ಗಾಯ

0
32

ರಾಂಚಿ: ಹೌರಾ-ಮುಂಬೈ ಮೇಲ್​ ಎಕ್ಸ್​ಪ್ರೆಸ್​​ ರೈಲು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದು ಕನಿಷ್ಠ 20 ಮಂದಿಗೆ ಗಾಯಗಳಾಗಿವೆ.
ಜಾರ್ಖಂಡ್‌ನ ಚರಧರ್‌ಪುರ ವಿಭಾಗದ ಸೆರೈಕೆಲಾ-ಖರ್ಸಾವನ್ ಜಿಲ್ಲೆಯ ರಾಜ್ಖರ್ಸ್ವಾನ್ ವೆಸ್ಟ್ ಔಟರ್ ಮತ್ತು ಬಾರಾಬಂಬೂ ನಡುವೆ ಇಂದು ಮುಂಜಾನೆ 12810 ನಂಬರ್‌ನ ಹೌರಾ-ಮುಂಬೈ ಮೇಲ್​ ಎಕ್ಸ್​ಪ್ರೆಸ್​​ ರೈಲು ಹಳಿ ತಪ್ಪಿ ಸಂಭವಿಸಿದೆ, ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು, ರಕ್ಷಣಾ ತಂಡಗಳು ಧಾವಿಸಿದ್ದು ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ, ರೈಲಿನ ನಾಲ್ಕು ಸಾಮಾನ್ಯ ಬೋಗಿಗಳನ್ನು ಹೊರತುಪಡಿಸಿ ಉಳಿದೆಲ್ಲ 18 ಬೋಗಿಗಳು ಹಳಿ ತಪ್ಪಿವೆ.

Previous articleತಾಯಿ ಮೇಲೆ ಕೊಡಲಿಯಿಂದ ಹಲ್ಲೆ
Next articleವಯನಾಡ್ ಭೂಕುಸಿತ: ಮೃತರ ಕುಟುಂಬಗಳಿಗೆ ಕೇಂದ್ರದಿಂದ 2 ಲಕ್ಷ ಪರಿಹಾರ ಘೋಷಣೆ