ಹಳಿತಪ್ಪಿದ ರೈಲು: ನಾಲ್ವರ ಸಾವು, ಹಲವರಿಗೆ ಗಾಯ

0
6

ಪಾಟ್ನಾ: ಬಿಹಾರದ ಬುಕ್ಸಾರ್‌ ಸಮೀಪದ ರಘುನಾಥಪುರ ರೈಲ್ವೆ ನಿಲ್ದಾಣದ ಬಳಿ ಬುಧವಾರ ರಾತ್ರಿ ಈಶಾನ್ಯ ಎಕ್ಸ್‌ಪ್ರೆಸ್ ರೈಲಿನ 21 ಬೋಗಿಗಳು ಹಳಿತಪ್ಪಿದ ಪರಿಣಾಮ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 50 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿಯ ಆನಂದ್‌ ವಿಹಾರದಿಂದ ಬುಧವಾರ ಬೆಳಿಗ್ಗೆ ಹೊರಟಿದ್ದ 23 ಕೋಚ್‌ಗಳಿದ್ದ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು (12506) ಅಸ್ಸಾಂನ ಗುವಾಹಟಿಯ ಕಾಮಾಕ್ಯಕ್ಕೆ ಹೊರಟಿತ್ತು. ರಾತ್ರಿ 9.35 ರ ಸಮಯದಲ್ಲಿ ದಾನಾಪುರ ರೈಲ್ವೆ ವಿಭಾಗಕ್ಕೆ ಸೇರಿದ ರಘುನಾಥಪುರ ಎಂಬಲ್ಲಿ ಹಳಿ ತಪ್ಪಿತು. ಈ ವೇಳೆ ಆರು ಬೋಗಿಗಳು ಉರುಳಿ ಬಿದ್ದಿವೆ. ಬೋಗಿಗಳ ಉರುಳಿದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಚ್‌ಗಳಲ್ಲಿ ಗಾಯಗೊಂಡಿದ್ದ ಹಲವರನ್ನು ಸ್ಥಳೀಯ ಬುಕ್ಸಾರ್‌ ಆಸ್ಪತ್ರೆಗೆ ದಾಖಲಿಸಲಾಯಿತು. ರೈಲ್ವೆ ವೈದ್ಯಕೀಯ ವಾಹನಗಳೂ ಆಗಮಿಸಿ ಗಾಯಾಗಳ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

Previous articleನೈಜ ತತ್ವ ತಿಳಿದುಕೋ…
Next article10ಕ್ಕೂ ಹೆಚ್ಚು ಕಡೆ ಐಟಿ ದಾಳಿ