ರಾಜಸ್ಥಾನ: ಅಜ್ಮೀರ್ನಿಂದ ಅಹಮದಾಬಾದ್ಗೆ ಹೋಗುವ ಮಾರ್ಗದಲ್ಲಿ ರೈಲಿನ ಹಳಿ ತಪ್ಪಿಸುವ ಪ್ರಯತ್ನ ನಡೆದಿದೆ.
ರೈಲ್ವೆ ಹಳಿ ಮೇಲಿದ್ದ ಸಿಮೆಂಟ್ ಮೈಲಿಗಲ್ಲಿಗೆ ಗೂಡ್ಸ್ ರೈಲು ಡಿಕ್ಕಿ ಹೊಡೆದು ಹಳಿ ತಪ್ಪಿದೆ. ರೈಲನ್ನು ಹಳಿತಪ್ಪಿಸುವ ಪ್ರಯತ್ನದಲ್ಲಿ 100 ಕಿಲೋಗ್ರಾಂಗಳಷ್ಟು ತೂಕದ ದೊಡ್ಡ ಕಾಂಕ್ರೀಟ್ ಬ್ಲಾಕ್ ನಿರ್ಮಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಹಳಿಯ ಮೇಲೆ ಸಿಮೆಂಟ್ ಬ್ಲಾಕ್ ಹಾಕಿರುವ ಮಾಹಿತಿ ನೌಕರರಿಗೆ ಸಿಕ್ಕಿದ್ದು, ಸ್ಥಳಕ್ಕಾಗಮಿಸಿದಾಗ ಬ್ಲಾಕ್ ಮುರಿದಿರುವುದು ಕಂಡು ಬಂದಿದೆ. ಅದೇ ಹಳಿಯಲ್ಲಿ ಮತ್ತೊಂದು ಸಿಮೆಂಟ್ ಬ್ಲಾಕ್ ಕೂಡಾ ಕಂಡು ಬಂದಿದೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.