Home ತಾಜಾ ಸುದ್ದಿ ಹರಿಯಾಣದಲ್ಲಿ ಬಿಜೆಪಿ, ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಮುನ್ನಡೆ

ಹರಿಯಾಣದಲ್ಲಿ ಬಿಜೆಪಿ, ಜಮ್ಮುಕಾಶ್ಮೀರದಲ್ಲಿ ಕಾಂಗ್ರೆಸ್ ಮೈತ್ರಿಕೂಟ ಮುನ್ನಡೆ

0

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಾಗೂ ಹರಿಯಾಣ ಚುನಾವಣಾ ಮತ ಎಣಿಕೆ ಭಾರೀ ಕುತೂಹಲ ಮೂಡಿಸಿದ್ದು, ಮಧ್ಯಾಹ್ನದ ವೇಳೆ ಫಲಿತಾಂಶ ಕುರಿತು ಸ್ಪಷ್ಟ ಚಿತ್ರಣಗಳು ಲಭ್ಯವಾಗುವ ನಿರೀಕ್ಷೆಗಳಿವೆ.
ಚುನಾವಣೋತ್ತರ ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್’ಗೆ ಸ್ಪಷ್ಟ ಬಹುಮತ ಮತ್ತು ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್-ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿಕೂಟಕ್ಕೆ ಮುನ್ನಡೆ ಇಲ್ಲವೇ ಸರಳ ಬಹುಮತದ ಸುಳಿವು ನೀಡಿದ್ದವು, ಆದರೆ ಹರಿಯಾಣದಲ್ಲಿ ಆರಂಭಿಕ ಹಿನ್ನಡೆ ಬಳಿಕ ಪುಟಿದೆದ್ದಿರುವ ಬಿಜೆಪಿ ಮುನ್ನಡೆಯತ್ತ ದಾಪುಗಾಲನ್ನಿಟ್ಟಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಪರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿ ಮುನ್ನಡೆ ಸಾಧಿಸಿವೆ.

Exit mobile version