ಕೊಪ್ಪಳ: ಎಸ್.ಸಿ.ಪಿ, ಟಿ.ಎಸ್.ಪಿ ಹಣ ಅನ್ಯ ಯೋಜನೆಗೆ ಈ ಹಣ ಬಳಸಬಾರದೆಂದು ಅವರೇ ಕಾನೂನು ಮಾಡಿದ್ದರು ಈಗ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿದ್ದಾರೆ. ಆ ಮೂಲಕ ಸರ್ಕಾರ ದಲಿತರಿಗೆ ಮೋಸ, ವಂಚನೆ ಮಾಡಿದೆ. ಗ್ಯಾರಂಟಿ ಯೋಜನೆ ದಲಿತರಿಗೆ ನೀಡಿಲ್ಲ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ-ಎಸ್ಟಿ ಜನರಿಗೆ ಕಾಂಗ್ರೆಸ್ ವಂಚನೆ ಮಾಡುತ್ತಿದೆ. ಎಸ್ಸಿಪಿ-ಟಿಎಸ್ಪಿ ಅನುದಾನ ಅನ್ಯ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದೆ. ನಾವೇ ಎಸ್ಸಿಪಿ-ಟಿಎಸ್ಪಿ ಜಾರಿ ಮಾಡಿದ್ದೇವೆ ಎಂದು ಕಾಂಗ್ರೆಸ್ಸಿನವರು ಹೇಳುತ್ತಾರೆ ಎಂದರು. ಅನ್ಯ ಯೋಜನೆಗೆ ಈ ಹಣ ಬಳಸಬಾರದೆಂದು ಅವರೇ ಕಾನೂನು ಮಾಡಿದ್ದರು. ಕಳೆದ ಬಜೆಟಿನಲ್ಲಿ ೩೯ ಸಾವಿರ ಕೋಟಿ ರೂ. ವೆಚ್ಚ ಮಾಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಎಸ್.ಸಿ.ಪಿ, ಟಿ.ಎಸ್.ಪಿ ಹಣ ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿದ್ದಾರೆ. ಕಳೆದ ಎರಡು ವರ್ಷದಲ್ಲಿ ೨೫,೪೬೨ ಕೋಟಿ ರೂ. ಅನುದಾನ ಬಳಕೆ ಮಾಡಿದ್ದಾರೆ. ಆ ಮೂಲಕ ಸರ್ಕಾರ ದಲಿತರಿಗೆ ಮೋಸ, ವಂಚನೆ ಮಾಡಿದೆ. ದಲಿತರು ಬಡವರಾಗಿಯೇ ಉಳಿಯಬೇಕು ಎನ್ನುವುದು ಈ ಸರ್ಕಾರದ ಉದ್ದೇಶವಾಗಿದೆ ಎಂದರು.