ಹಣ್ಣಿಗೆ ವಿಸ ಹಾಕಿ ೩೦ ಮಂಗಗಳ ಮಾರಣ ಹೋಮ

0
12

ಚಿಕ್ಕಮಗಳೂರು: ಬಾಳೆಹಣ್ಣಿಗೆ ವಿಸ ಹಾಕಿ ೩೦ ಮಂಗಗಳನ್ನ ಕೊಂದ ಹಾಕಿದ ಅಮಾನವೀಯ ಘಟನೆಯ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ದ್ಯಾವಣ ಗ್ರಾಮದಲ್ಲಿ ನಡೆದಿದೆ.
ಬಳಿಕ ಅವುಗಳನ್ನು ತಂದು ರಸ್ತೆಗೆ ಎಸೆದು ಹೋಗಿದ್ದಾರೆ. ಹೌದು, ಬಾಳೆಹಣ್ಣು ತಿಂದು ಮಂಗಗಳು ಜ್ಞಾನ ತಪ್ಪಿದ ಬಳಿಕ ತಲೆಗೆ ಹೊಡೆದು ೧೬ ಗಂಡು, ೧೪ ಹೆಣ್ಣು ಹಾಗೂ ೪ ಮರಿಗಳನ್ನು ಹತ್ಯೆ ಮಾಡಲಾಗಿದೆ. ಇನ್ನು ೩೦ ಮಂಗಗಳ ತಲೆಯಲ್ಲೂ ಒಂದೇ ರೀತಿಯ ಗಾಯವಾಗಿ ರಕ್ತಸುರಿದು ಸಾವನ್ನಪ್ಪಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಭೇಟಿ ನಿಡಿದ್ದು, ಡಿ.ಎಫ್.ಓ, ಆರ್.ಎಫ್.ಓ, ಪಿ.ಎಸ್.ಐ, ಪಶುಸಂಗೋಪನೆ, ಪಶುವೈದ್ಯ, ಪಂಚಾಯಿತಿ ಅಧಿಕಾರಿಗಳು ಹಾಗೂ ಆಶಾಕಾರ್ಯರ್ತೆಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಗಳ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇತ್ತ ಮಂಗಗಳ ಮಾರಣ ಹೋಮಕ್ಕೆ ಪ್ರಾಣಿಪ್ರಿಯರು ಕಿಡಿಕಾರಿದ್ದಾರೆ. ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Previous articleಬಸ್ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು
Next articleನಾಗೇಂದ್ರ ರಾಜೀನಾಮೆ ಅಂಗೀಕಾರ