ಸ್ವಾಮೀಜಿ ಆಶೀರ್ವಾದ ಪಡೆದ ಪೊಲೀಸರಿಗೆ ವರ್ಗಾವಣೆ ಭಾಗ್ಯ

ಬಾಗಲಕೋಟೆ: ಸಿದ್ದನಕೊಳ್ಳದ ಡಾ.ಶಿವಕುಮಾರ ಸ್ವಾಮೀಜಿ ಅವರಿಂದ ಬೈಗುಳ ತಿಂದು ಆಶೀರ್ವಾದ ರೂಪದಲ್ಲಿ ಹಣ ಪಡೆದಿದ್ದ ಬಾದಾಮಿ ಠಾಣೆಯ ಎಎಸ್‌ಐ ಸೇರಿದಂತೆ 6 ಸಿಬ್ಬಂದಿಯನ್ನು ವರ್ಗಾಣೆಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈ.ಅಮರನಾಥ ರೆಡ್ಡಿ ಅವರು ಆದೇಶಿಸಿದ್ದಾರೆ.
ಶಿಷ್ಟಾಚಾರ ಉಲ್ಲಂಘಿಸಿದ್ದಕ್ಕಾಗಿ ಎಎಸ್‌ಐಗಳಾದ ಜಿ.ಬಿ. ದಳವಾಯಿ ಅವರನ್ನು ಹುನಗುಂದ ಪೊಲೀಸ್ ಠಾಣೆಗೆ, ಡಿ.ಜೆ.ಶಿವಪೂರ ಅವರನ್ನು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಗೆ, ಮುಖ್ಯ ಪೇದೆ ಎನ್.ಪಿ. ಅಂಕೋಲೆ ಅವರನ್ನು ಬೀಳಗಿ ಪೊಲೀಸ್ ಠಾಣೆಗೆ ಹಾಗೂ ಪೇದೆಗಳಾದ ಜಿ.ಬಿ. ಅಂಗಡಿ ಅವರನ್ನು ಇಳಕಲ್ ಶಹರ್ ಪೊಲೀಸ್ ಠಾಣೆಗೆ, ರಮೇಶ ಇಳಗೇರ ಅವರನ್ನು ಬಾಗಲಕೋಟೆ ಗ್ರಾಮೀಣ ಠಾಣೆಗೆ ಹಾಗೂ ಎಂ.ಎಸ್. ಹುಲ್ಲೂರ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಗಾರ್ಡ್ ಕರ್ತವ್ಯಕ್ಕೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಈ ಸಿಬ್ಬಂದಿಗೆ ಪೊಲೀಸ್ ವಸತಿಗೃಹಗಳಲ್ಲಿ ವಾಸವಾಗಿದ್ದಲ್ಲಿ ಮಾರ್ಚ್ 17ರೊಳಗಾಗಿ ತೆರವುಗೊಳಿಸುವಂತೆ ಸೂಚಿಸಲಾಗಿದೆ.