ಸ್ಥಾನಕ್ಕೆ ಘನತೆ ಗೌರವ ಇಲ್ಲದ ಮೇಲೆ ಇಲ್ಲಿ ಇರಬಾರದು

0
27

ಹುಬ್ಬಳ್ಳಿ:  ಇತ್ತಿಚೆಗೆ ಸದನದಲ್ಲಿ ನಡೆದ ಬೆಳವಣಿಗೆ ನನ್ನ ಮನಸ್ಸಿಗೆ ಬೇಸರ ತರಿಸಿದೆ. ಹಾಗಾಗಿ ವಿಧಾನ ಪರಿಷತ್ ಸಭಾಪತಿ  ಸ್ಥಾನದಲ್ಲಿ ಮುಂದುವರೆಯುವುದು ಸೂಕ್ತವಲ್ಲ ಎಂಬ ಭಾವನೆ ಬಂದಿದೆ ಎಂದು ವಿಧಾನ‌ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಹುಬ್ಬಳ್ಳಿಯಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ನೇಹಿತರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು. ಸದನದಲ್ಲಿ ನಡೆದ ಬೆಳೆವಣಿಗೆ ನಿಯಂತ್ರಿಸುವಲ್ಲಿ ನಾನು ವಿಫಲವಾಗಿದ್ದೇನೆ ಎಂದು ಅನಿಸುತ್ತಿದೆ. ನಾನು ಈ ಸ್ಥಾನಕ್ಕೆ ಯೋಗ್ಯ ಇದ್ದಿನೋ ಇಲ್ಲವೋ ಎಂದು ಅನಿಸುತ್ತಿದೆ. ಈ ಸ್ಥಾನಕ್ಕೆ ಘನತೆ ಗೌರವ ಇಲ್ಲದ ಮೇಲೆ ಇಲ್ಲಿ ಇರಬಾರದು ಎಂದು ತೀರ್ಮಾನಕ್ಕೆ ಬಂದಿದ್ದೇನೆ‌ ಎಂದು ಹೇಳಿದ್ದಾರೆ.
ಸದನ ಬಹಳ ಹದಗೆಟ್ಟಿದೆ. ಸಭಾಪತಿಗಳದ ಮಾತು  ಯಾರೂ ಕೇಳುವುದಿಲ್ಲ. ಸದನ ನಡೆಸುವುದು ಬಹಳ ಕಷ್ಟವಾಗಿದೆ. ಸದನದಲ್ಲಿ  ಕುಳಿತು ಸರಿಯಾಗಿ ನಡೆಸದಿದ್ದರೆ ನಾವು ಅಯೋಗ್ಯರು ಎನ್ನಿಸಿಕೊಳ್ಳಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಧಾನ ಪರಿಷತ್ತಿನಲ್ಲಿ ಜೈಕಾರ, ಧಿಕ್ಕಾರ ಕೂಗಬಾರದು ಎನ್ನುವ ನಿಯಮವಿದೆ. ಅದರೂ ಅದನ್ನು ಯಾರು ಪಾಲನೆ ಮಾಡುತ್ತಿಲ್ಲ. ಇವುಗಳನ್ನೆಲ್ಲ ನೋಡಿಕೊಂಡು ಮೂಕಪ್ರೇಕ್ಷರಂತೆ ಕುಳಿತುಕೊಳ್ಳುವಂತಾಗಿದೆ. ೪೫ ವರ್ಷದ ಅನುಭವ ೧೫ ಮುಖ್ಯಮಂತ್ರಿಗಳ, ೧೨ ಸಭಾಪತಿಗಳನ್ನು ನೋಡಿದ್ದೇನೆ. ನಾನು ಯಾರ ಮೇಲೆ ಆರೋಪ ಮಾಡುವುದಿಲ್ಲ. ಸದನ ನಡೆಸಲು ನನಗೆ ಯೋಗ್ಯತೆಯಿಲ್ಲ ಅನ್ನಿಸುತ್ತಿದೆ ಎಂದರು.

Previous articleಶಾಸಕರ ಅಮಾನತು‌ ವಾಪಸ್ ಪಡೆಯಬೇಕು
Next articleಹನಿಟ್ರ್ಯಾಪ್ ಸಿಎಂ ಕುರ್ಚಿ ಸುತ್ತುವರಿದ ಪ್ರಕರಣ: ಬಿವೈವಿ