ಸೈಟ್ ಹಿಂದಿರುಗಿಸುವುದು ಪೂರ್ವ ನಿಯೋಜಿತ

0
24
ಜಗದೀಶ ಶೆಟ್ಟರ್‌

ಹುಬ್ಬಳ್ಳಿ: ಸೈಟ್ ಹಿಂದಿರುಗಿಸಿದ್ದು ಪೂರ್ವ ನಿಯೋಜಿತ. ಮೇಲ್ನೋಟಕ್ಕೆ ಅದು `ನನ್ನ ಶ್ರೀಮತಿಯ ನಿರ್ಧಾರ’ ಎನ್ನುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ನೀಡಿ ವಿಚಾರಣೆ ಎದುರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಸವಾಲು ಹಾಕಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೈಟ್ ವಾಪಸ್ ಕೊಟ್ಟಾಕ್ಷಣ ಎಲ್ಲವೂ ಮುಚ್ಚಿ ಹೋಗುವುದಿಲ್ಲ. ಕಾನೂನು ಪ್ರಕಾರ ಏನು ಆಗಬೇಕೋ ಅದು ಆಗುತ್ತದೆ. ಸಿಎಂ ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಅವರು ಗೌರವಯುತವಾಗಿ ರಾಜೀನಾಮೆ ನೀಡಬೇಕಿತ್ತು. ಬಹುಶಃ ನಾನು ರಾಜೀನಾಮೆ ನೀಡಿದರೆ ವಾಪಸ್ ಮತ್ತೆ ಸಿಎಂ ಆಗಲ್ಲ ಎನ್ನುವ ಭಯ ಸಿದ್ದರಾಮಯ್ಯ ಅವರಿಗಿದೆ. ಆದರೆ, ಅನಿವಾರ್ಯವಾಗಿ ಅವರು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.
ಜನರಿಗೆ ಆಡಳಿತ ಹತ್ತಿರವಾಗಬೇಕಾರೆ ಬೆಳಗಾವಿ ಜಿಲ್ಲೆ ವಿಭಜನೆಯಾಗಬೇಕು. ಈ ಬಗ್ಗೆ ವೈಜ್ಞಾನಿಕ ಅಧ್ಯಯನ ಆಗಬೇಕು. ಎಲ್ಲರ ಜೊತೆಗೆ ಸಮಾಲೋಚನೆ ಮಾಡಿ ರಾಜ್ಯ ಸರ್ಕಾರ ಒಂದು ನಿರ್ಧಾರಕ್ಕೆ ಬರಬೇಕು ಎಂದರು.

Previous articleಸಿದ್ದರಾಮಯ್ಯ ಜತೆಗೆ ಸರ್ಕಾರಕ್ಕೂ ಅಭದ್ರತೆ ಕಾಡುತ್ತಿದೆ
Next articleರಾಜೀನಾಮೆ ನೀಡಿ ನಿಮ್ಮತನ ಉಳ್ಳಿಸಿಕೊಳ್ಳಿ