ಸೈಟ್ ವಾಪಸ್ ಕೊಟ್ಟಿದ್ದಕ್ಕೆ ಆಪಾದನೆ ರದ್ದಾಗಲ್ಲ

0
10
ಜಗದೀಶ ಶೆಟ್ಟರ್‌

ಧಾರವಾಡ: ತಮ್ಮ ಪತ್ನಿಗೆ ತಪ್ಪು ಮಾಡಲು ಹೇಳಿ ಈಗ ಪ್ರತಿ ಪಕ್ಷಗಳು ನನ್ನ ಹೆಂಡತಿ ಹೆಸರನ್ನು ಬೀದಿಗೆ ತರುವ ಕೆಲಸ ಮಾಡುತ್ತಿವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರೇ ತಮ್ಮ ಧರ್ಮಪತ್ನಿಯ ಹೆಸರು ಹೊರಗೆ ತಂದವರು. ಮುಡಾದಲ್ಲಿ ಸೈಟು ಕೊಡಿಸಿದ್ದಾರೆ. ಈಗ ತಮಗೇನೂ ಗೊತ್ತಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ತಪ್ಪು ಮಾಡಿದ ಕಾರಣಕ್ಕೆ ಸೈಟ್ ವಾಪಸ್ ಕೊಟ್ಟಿದ್ದಾರೆ. ಸಿಕ್ಕಿಹಾಕಿಕೊಂಡ ಮೇಲೆ ಕದ್ದ ಆಭರಣ ಮರಳಿಸಿದರೆ ಆಪಾದನೆ ಹೋಗುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ತಪ್ಪಿದ್ದಲ್ಲ ಎಂದರು.
ಮುಡಾ ಹಗರಣದ ತನಿಖೆಯಾಗಿದೆ. ಈ ಕುರಿತು ಅಧಿವೇಶನದಲ್ಲಿ ಚರ್ಚೆ ಮಾಡಲು ಅವಕಾಶ ಕೊಡಲಿಲ್ಲ. ಚರ್ಚೆಯ ಪ್ರಸ್ತಾಪವನ್ನೇ ತಿರಸ್ಕಾರ ಮಾಡಿಸಿದರು. ಹಗರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ. ಸೈಟ್ ಮರಳಿ ಕೊಟ್ಟಿದ್ದಕ್ಕೆ ಆಪಾದನೆ ರದ್ದಾಗಲು ಸಾಧ್ಯವಿಲ್ಲ. ಸಿದ್ದರಾಮಯ್ಯ ರಾಜೀನಾಮೆ ನೀಡಿ ನಂತರ ತನಿಖೆ ಎದುರಿಸಿ ಆರೋಪ ಮುಕ್ತರಾಗಿ ಮತ್ತೆ ಮುಖ್ಯಮಂತ್ರಿ ಕುರ್ಚಿ ಏರಬೇಕು ಎಂದು ತಿಳಿಸಿದರು.

Previous articleದಲಿತ ಮುಖ್ಯಮಂತ್ರಿ ಇತ್ಯಾದಿ ವಿಚಾರಗಳು ಸದ್ಯಕ್ಕೆ ಅಪ್ರಸ್ತುತ
Next articleಜೈಲಿನಲ್ಲೇ ಬಡಿದಾಟ