ಸೇನೆ ವಿಮಾನ ಪತನ: 8 ಜನಕ್ಕೆ ಗಾಯ

0
7

ಮ್ಯಾನ್ಮಾರ್‌ ಸೇನೆಯ ವಿಮಾನವೊಂದು ಪತನಗೊಂಡಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮಿಜೋರಾಂನ ಲೆಂಗ್‌ಪೊಯಿ ವಿಮಾನ ನಿಲ್ದಾಣದ ವಿಮಾನದ ರನ್‌ವೇನಲ್ಲಿ ಇಂದು ಬೆಳಗ್ಗೆ 10ರ ಸುಮಾರಿಗೆ ಮ್ಯಾನ್ಮಾರ್‌ ಸೇನೆಯ ವಿಮಾನವು ಪತನಗೊಂಡಿದೆ.
ಮ್ಯಾನ್ಮಾರ್‌ನ 270ಕ್ಕೂ ಹೆಚ್ಚು ಸೈನಿಕರು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದಾರೆ. ಸಂಘರ್ಷದ ಹಿನ್ನೆಲೆಯಲ್ಲಿ ಇವರು ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ. ಸೈನಿಕರನ್ನು ಕರೆದುಕೊಂಡು ಹೋಗಲು ಮ್ಯಾನ್ಮಾರ್‌ ಸೇನೆಯು ವಿಮಾನವನ್ನು ಕಳುಹಿಸಿತ್ತು. ಆದರೆ, ಸೈನಿಕರನ್ನು ಕರೆದುಕೊಂಡು ಹೋಗುವ ಮೊದಲೇ ವಿಮಾನ ಪತನವಾಗಿದೆ. ವಿಮಾನದಲ್ಲಿ 14 ಜನ ಇದ್ದು, ಗಾಯಗೊಂಡಿರುವ ಎಂಟು ಮಂದಿಯನ್ನು ಲೆಂಗ್‌ಪುಯಿ ಆಸ್ಪತ್ರೆಗೆ ರವಾನಿಸಲಾಗಿದೆ.

Previous articleಹಿರೇಮಗಳೂರು ಕಣ್ಣನ್‌ಗೆ ಜಿಲ್ಲಾಡಳಿತ ನೋಟಿಸ್
Next articleನ್ಯಾಯ ಯಾತ್ರೆಯ ಮೇಲೆ ದಾಳಿ ನಡೆಯುತ್ತಿರುವಾಗ ನ್ಯಾಯ ಸಿಗಲು ಹೇಗೆ ಸಾಧ್ಯ ?