ಸೇತುವೆ ಜಲಾವೃತ: ೨೦ ಕೀಮೀ ಸುತ್ತುವರೆದು ಸಂಚಾರ

0
17

ಕುಳಗೇರಿ ಕ್ರಾಸ್: (ಜಿ.ಬಾಗಲಕೋಟೆ) ಬಾದಾಮಿ ನರಗುಂದ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಮಲಪ್ರಭಾ ನದಿಯ ಗೋವನಕೊಪ್ಪ ಹಳೆ ಸೇತುವೆ ಹಾಗೂ ಕಿತ್ತಲಿ ಬ್ಯಾರೆಜ್ ಸಂಪೂರ್ಣ ಜಲಾವೃತಗೊಂಡಿದೆ. ಕೆಲವು ಗ್ರಾಮದ ಜನರು ಸುಮಾರು ೨೦ ಕೀಮೀ ಸುತ್ತುವರೆದು ಸಂಚರಿಸುವ ಪರಿಸ್ಥಿತಿ ನಿರ್ಮಾನವಾಗಿದೆ.

ಮಲಪ್ರಭಾ ಜಲಾನಯಣ ಪ್ರದೇಶದಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು ಜಲಾಶಯದ ಒಳಹರಿವು ಅಧಿಕವಾಗಿದೆ. ನವಿಲುತೀರ್ಥ ಜಲಾಶಯ ಸಂಪೂರ್ಣ ಭರ್ತಿಯಾಗಿದೆ. ಸದ್ಯ ಸಂಪೂರ್ಣ ನೀರನ್ನು ಹೊರ ಬಿಡಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಬಾದಾಮಿ ತಹಸಿಲ್ದಾರ ಮಧುರಾಜ ಕೂಡಲಗಿ ಮಾರ್ಗದಶ್ನದಲ್ಲಿ ಕಂದಾಯ ನಿರೀಕ್ಷಕ ವಿ ಎ ವಿಶ್ವಕರ್ಮ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿದ್ದು ಜನರು ನದಿಯ ಪಾತ್ರಕ್ಕೆ ಹೋಗದಂತೆ ಮುಂಜಾಗೃತ ಕ್ರಮವಾಗಿ ರಸ್ತೆಗಳನ್ನ ಮುಳ್ಳು ಕಂಠಿಗಳಿಂದ ಸಂಚಾರ ಸ್ಥಗಿತಗೊಳಿಸಿದ್ದಾರೆ.

Previous article‘ಮಂಗಳೂರು ದಸರಾ’ ಮಹೋತ್ಸವ ಸಂಪನ್ನ ಮಳೆ ನಡುವೆಯೂ ಕುಗ್ಗದ ಉತ್ಸಾಹ
Next articleಸವದತ್ತಿಗೆ ಬರುವ ಭಕ್ತಾದಿಗಳ ಅನುಕೂಲಕ್ಕೆ ಮೂಲಸೌಕರ್ಯ ಒದಗಿಸಲು ತೀರ್ಮಾನ