ಮಂಗಳೂರು: ಬಜ್ಪೆ ಕಿನ್ನಿ ಪದವು ಎಂಬಲ್ಲಿ ಕಳೆದ ರಾತ್ರಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಮಂಗಳೂರಿನಲ್ಲಿ ಪರಿಸ್ಥಿತಿ ಪ್ರಕ್ಷುಬ್ದಗೊಂಡಿದ್ದು ಸುರತ್ಕಲ್ ಬಜ್ಪೆ ಸೇರಿದಂತೆ ಮಂಗಳೂರು ನಗರ ಬಹುತೇಕ ಸ್ತಬ್ಧ ಗೊಂಡಿದೆ. ವಿವಿಧ ಕಡೆ ಅಂಗಡಿ ಮುಂಗಟ್ಟು ಬಸ್ ಸಂಚಾರ ಸ್ಥಗಿತ ಗೊಂಡಿದೆ ಅಲ್ಲಲ್ಲಿ ಬಸ್ ಗಳಿಗೆ ಕಲ್ಲು ತೂರಲಾಗಿದೆ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆಗೊಳಿಸಲಾಗಿದೆ