ಸುಹಾಸ್ ಶೆಟ್ಟಿ ಕೊಲೆ ಪ್ರಕರಣ NIAಗೆ

ಬೆಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು NIAಗೆ ನೀಡಿರುವ ಕೇಂದ್ರ ಗೃಹ ಇಲಾಖೆಯ ಕ್ರಮವನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಸ್ವಾಗತಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (NIA ) ನೀಡಿರುವ ಕೇಂದ್ರ ಗೃಹ ಇಲಾಖೆಯ ಕ್ರಮವನ್ನು ಸ್ವಾಗತಿಸುತ್ತೇನೆ. ರಾಜ್ಯ ಸರ್ಕಾರದ ಯಾವುದೇ ಒತ್ತಡ/ಹಸ್ತಕ್ಷೇಪವಿಲ್ಲದೆ ಕಾರ್ಯನಿರ್ವಹಿಸಬಲ್ಲ NIA ಗೆ ರಾಷ್ಟ್ರವ್ಯಾಪಿ ನ್ಯಾಯ್ವ್ಯಾಪ್ತಿ (Nationwide Jurisdiction) ಇರುತ್ತದೆ.

ಇದರಿಂದ ಕ್ಲಿಷ್ಟಕರ ಪ್ರಕರಣವನ್ನು ಭೇದಿಸುವ ಸಾಮರ್ಥ್ಯ, ತರಬೇತಿ ಹಾಗೂ ಸ್ವಾಯತ್ತತೆ ಇರುತ್ತದೆ. ಗಡಿಯಾಚೆಗಿನ ತನಿಖೆಯನ್ನು NIA ಮಾಡಬಹುದು ಇದರಿಂದ ಹೊರದೇಶದಿಂದ ಭಾರತಕ್ಕೆ ಬರುತ್ತಿರುವ ಅಕ್ರಮ ಹಣ ಸೇರಿದಂತೆ, ಸ್ಲೀಪರ್ ಸೆಲ್ ಗಳನ್ನೂ ಸಹ ಹೆಡೆಮುರಿಕಟ್ಟಬಹುದು. ಕರಾವಳಿಯಲ್ಲಿ ಜಿಹಾದಿ ಉಗ್ರರ ಉಪಟಳಕ್ಕೆ ಮಡಿದಿರುವ ಅನೇಕ ಹಿಂದೂ ಕಾರ್ಯಕರ್ತರ ಸಾವಿಗೆ NIA ನ್ಯಾಯ ಒದಗಿಸಬಲ್ಲದು ಎಂಬ ಧೃಡ ವಿಶ್ವಾಸವಿದೆ ಎಂದಿದ್ದಾರೆ.