ಸುವರ್ಣಸೌಧ ಬಳಿ ಟ್ಯಾಂಕರ್ ಪಲ್ಟಿ

0
24

ಬೆಳಗಾವಿ: ಸುವರ್ಣ ವಿಧಾನಸೌಧ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿಸೇಲ್ ಸಾಗಿಸುತ್ತಿದ್ದ ಟ್ಯಾಂಕ‌ರ್ ಪಲ್ಟಿಯಾದ ಘಟನೆ ನಡೆದಿದೆ.
ಇಲ್ಲಿಯ ಹಲಗಾ-ಬಸ್ತವಾಡ ಸುವರ್ಣ ವಿಧಾನಸೌಧ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯಾಹ್ನ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್‌ ಪಲ್ಟಿಯಾಗಿದ್ದು, ಅಪಾರ ಪ್ರಮಾಣದ ಡಿಸೇಲ್ ರಸ್ತೆ ಪಾಲಾಗಿದೆ. ಬೆಳಗಾವಿಯಿಂದ ಬೈಲಹೊಂಗಲ ಕಡೆಗೆ ಹೊರಟಿದ್ದ ಡಿಸೇಲ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಬಿದ್ದಿದೆ. ಕೂಡಲೇ ಸ್ಥಳಕ್ಕೆ ಬಂದ ಹಿರೇಬಾಗೇವಾಡಿ ಪೊಲೀಸರು ವಾಹನಗಳನ್ನು ನಿಲ್ಲಿಸಿದ್ದಾರೆ. ಒಂದು ಕಿ.ಮೀ. ದೂರದಲ್ಲಿಯೇ ವಾಹನಗಳನ್ನು ನಿಲ್ಲಿಸಿ ಮುಂದೆ ಆಗುವ ಅನಾಹುತವನ್ನು ತಡೆದಿದ್ದಾರೆ. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಬಂದು ಟ್ಯಾಂಕರ್‌ಗೆ ನೀರು ಹೊಡೆದಿದ್ದಾರೆ. ಟ್ಯಾಂಕರ್‌ನಲ್ಲಿ ಸಾವಿರಾರು ಲೀಟ‌ರ್ ಡಿಸೇಲ್ ರಸ್ತೆ ಮೇಲೆ ಹರಿದು ಹೋಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಪೊಲೀಸರು ಕಾರ್ಯಾಚರಣೆ ನಡೆಸಿ, ಕ್ರೇನ್ ಮೂಲಕ ವಾಹನ ಮೇಲೆತ್ತಿದರು.

Previous articleಮೃತ ಕಾರ್ಮಿಕನ ದೇಹವನ್ನು ಎಳೆದೊಯ್ದಿರುವ ಘಟನೆ ದಿಗ್ಭ್ರಮೆ ಮೂಡಿಸಿದೆ
Next articleಅಕ್ಕಿ-ಚಿಕ್ಕಿಗಳ ಚಿಕ್ಕಾಸಿನ ರಾಜಕೀಯ!