ಸುರಕ್ಷತೆಯ ಗ್ಯಾರೆಂಟಿ ಯಾವಾಗ

0
26

ಬೆಂಗಳೂರು: ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಸುರಕ್ಷತೆಯ ಗ್ಯಾರೆಂಟಿ ಯಾವಾಗ ಕೊಡುತ್ತೀರಿ? ಎಂದು ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಬಾಣಂತಿಯರ ಪಾಲಿಗೆ ಇದು ಕೊಲೆಗಡುಕ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಬಾಣಂತಿಯರ ಸಾವು 30%ರಷ್ಟು ಇಳಿಕೆಯಾಗಿದೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದ ಆರೋಗ್ಯ ಸಚಿವ
ದಿನೇಶ ಗುಂಡುರಾವ ಅವರೇ, ರಾಜ್ಯದಲ್ಲಿ ಕಳೆದ 9 ತಿಂಗಳಲ್ಲಿ, ಅಂದರೆ ಏಪ್ರಿಲ್ 2024ರಿಂದ ಡಿಸೆಂಬರ್ 2024ರ ರವರೆಗೆ ರಾಜ್ಯದಲ್ಲಿ 464 ಬಾಣಂತಿಯರ ಸಾವಾಗಿದ್ದು, ಇದರಲ್ಲಿ 70% ಸಾವುಗಳನ್ನು ತಡೆಯಬಹುದಾಗಿತ್ತು ಎಂದು ರಾಜ್ಯ ಮಟ್ಟದ ತಜ್ಞರ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವಿಶ್ಲೇಷಣಾ ವರದಿ ಹೇಳಿದೆ.

ಇವುಗಳಲ್ಲಿ 10 ಪ್ರಕರಣಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿಗಳ ನಿರ್ಲಕ್ಷ್ಯವೆ ಕಾರಣ ಎಂದು ಹೇಳಲಾಗಿದ್ದರೆ, 68% ಪ್ರಕರಣಗಳಲ್ಲಿ ಬಾಣಂತಿಯರಿಗೆ ಸೋಂಕು ತಗುಲಿರುವುದೇ ಕಾರಣ ಎಂದು ಹೇಳಲಾಗಿದ್ದು, 70% ಅಂದರೆ ಸುಮಾರು 325 ಬಾಣಂತಿ ಮಹಿಳೆಯರ ಸಾವಿಗೆ ಸರ್ಕಾರವೇ ನೇರ ಕಾರಣ. ತಮ್ಮ ಸರ್ಕಾರ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಮಹಿಳೆಯರು ಬಲಿಯಾಗಬೇಕು ಸ್ವಾಮಿ? ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರ ಸುರಕ್ಷತೆಯ ಗ್ಯಾರೆಂಟಿ ಯಾವಾಗ ಕೊಡುತ್ತೀರಿ? ಎಂದಿದ್ದಾರೆ.

Previous articleಮುಖ್ಯ ಮಂತ್ರಿಗಳೇ ಅವರನ್ನು ವಜಾ ಮಾಡಿ
Next articleರೈತರ ಹೋರಾಟಕ್ಕೆ ಮಣಿದ ಸರ್ಕಾರ: ಕಾಲುವೆಗಳಿಗೆ ನೀರು ಬಿಡುಗಡೆ