ಬೆಂಗಳೂರು: ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ನೂತನವಾಗಿ ನೀಡುತ್ತಿರುವ ಕೆ.ಪ್ರಹ್ಲಾದರಾವ್(ಮಂಡ್ಯ) ದತ್ತಿ ಪ್ರಶಸ್ತಿಗೆ ಸಂಯುಕ್ತ ಕರ್ನಾಟಕ ಪತ್ರಿಕೆ ಸಂಪಾದಕ ಮಹಾಬಲ ಸೀತಾಳಭಾವಿ ಆಯ್ಕೆಯಾಗಿದ್ದಾರೆ. ಅಲ್ಲದೆ ಸಂಘ ಇತರ ಮೂವರು ಹಿರಿಯ ಪತ್ರಕರ್ತರಿಗೆ ದತ್ತಿ ಪ್ರಶಸ್ತಿ ಘೋಷಣೆ ಮಾಡಿದೆ.
ತುಮಕೂರಿನಲ್ಲಿ ಜನವರಿ ೧೮ ಮತ್ತು ೧೯ ರಂದು ನಡೆಯಲಿರುವ ೩೯ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ತಿಳಿಸಿದ್ದಾರೆ.
ಗಣೇಶ್ ಜಿ. ದತ್ತಿ ಪ್ರಶಸ್ತಿಗೆ ಮೂರ್ತಿ, ಜಿ.ಆರ್. (ಮೀಸೆ ಮೂರ್ತಿ) ಗರುಡನಗಿರಿ ನಾಗರಾಜ್ ಪ್ರಶಸ್ತಿಗೆ ವಿಜಯ ಕರ್ನಾಟಕದ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ, ಗುರುಲಿಂಗಸ್ವಾಮಿ ಹೋಳಿಮಠ ಪ್ರಶಸ್ತಿಗೆ ಚಿಕ್ಕಬಳ್ಳಾಪುರದ ಹಿರಿಯ ಪತ್ರಕರ್ತ ಎಚ್.ವಿ.ಸೋಮಶೇಖರ್ ಅಯ್ಕೆಯಾಗಿದ್ದಾರೆ.
ವಿಜಯ ಕರ್ನಾಟಕದ ಬಜೆಟ್ ಪುಟಕ್ಕೆ ಅತ್ಯುತ್ತಮ ಮುಖಪುಟ ವಿನ್ಯಾಸ ಮಾಡಿದ ಪ್ರಶಸ್ತಿ ಲಭ್ಯವಾಗಿದೆ.
ಸಾಧನೆಗೈದ ಜಿಲ್ಲಾ ಸಂಘಗಳು
ರಾಜ್ಯ ಸಮ್ಮೇಳನದಲ್ಲಿ ಉತ್ತಮ ಸಾಧನೆ ಮಾಡಿದ ಜಿಲ್ಲಾ ಸಂಘಗಳಿಗೆ ಕಾರ್ಯನಿರತ ಪತ್ರಕರ್ತರ ಸಂಘ ಪ್ರಶಸ್ತಿ ಘೋಷಣೆ ಮಾಡಿದೆ.
ಉಡುಪಿ ಜಿಲ್ಲಾ ಸಂಘ (ಸಂಘದ ರಜತ ಮಹೋತ್ಸವ ಹಿನ್ನೆಲೆ ಮತ್ತು ಕಾರ್ಯ ಚಟುವಟಿಕೆ ಪರಿಗಣಿಸಲಾಗಿದೆ)
ತುಮಕೂರು (ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿ ಆಯೋಜನೆ ಮತ್ತು ನಿರಂತರ ಕಾರ್ಯ ಚಟುವಟಿಕೆ)
ಉತ್ತರ ಕನ್ನಡ (ಸಂಘದ ಸುವರ್ಣ ಸಂಭ್ರಮ ಹಿನ್ನೆಲೆ ಮತ್ತು ಕಾರ್ಯಚಟುವಟಿಕೆ ಪರಿಗಣಿಸಿದೆ)
ಉತ್ತಮ ತಾಲೂಕು ಸಂಘಗಳು
ಸೇಡಂ- ಕಲಬುರ್ಗಿ ಜಿಲ್ಲೆ
ಜಗಳೂರು- ದಾವಣಗೆರೆ ಜಿಲ್ಲೆ
ಕುಶಾಲನಗರ-ಕೊಡಗು ಜಿಲ್ಲೆ
ನಾಗಮಂಗಲ-ಮಂಡ್ಯ