ಸಿ.ಟಿ.ರವಿ ಪ್ರಕರಣ: ಅರ್ಜಿ ವಿಚಾರಣೆ ಮಧ್ಯಾಹ್ನ 3ಕ್ಕೆ ಮುಂದೂಡಿಕೆ

0
23

ಬೆಳಗಾವಿ: ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ ಅವರನ್ನು ಬೆಳಗಾವಿ ಹಿರೇಬಾಗೆವಾಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸಿಟಿ ರವಿ ಅವರನ್ನು ಪೊಲೀಸರು ಶುಕ್ರವಾರ ಬೆಳಗಾವಿ ಜೆಎಂಎಫ್​ಸಿ ಕೋರ್ಟ್​ಗೆ ಹಾಜರುಪಡಿಸಿದರು. ರವಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ, ಜಾಮೀನು ಅರ್ಜಿ ವಿಚಾರಣೆಯನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

ಬೆಳಗಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿಯ ಪರಿಷತ್‌ ಸದಸ್ಯ ಸಿ ಟಿ ರವಿ ಅವಾಚ್ಯ ಶಬ್ದ ಬಳಸಿ ನಿಂದಿಸಿರುವುದು ಗುರುವಾರ ದಿನವಿಡೀ ಸುವರ್ಣಸೌಧದಲ್ಲಿ ಕೋಲಾಹಲಕ್ಕೆ ಕಾರಣವಾಗಿ, ಪ್ರಕ್ಷುಬ್ಧ ವಾತಾವರಣವನ್ನೇ ಸೃಷ್ಟಿಸಿತ್ತು. ಕಲಾಪ ಮುಂದೂಡಿಕೆ ಆಗುತ್ತಿದ್ದಂತೆಯೇ ಬೆಳಗಾವಿ ಪೊಲೀಸರು ಸಂಜೆ ಸಿ ಟಿ ರವಿ ಅವರನ್ನು ಬಂಧಿಸಿದ್ದರು.

Previous articleಸಿ.ಟಿ.ರವಿ ಬಂಧನ ಖಂಡಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
Next articleಅಸಂವಿಧಾನಿಕ ಪದ ಬಳಸಿದ್ದಕ್ಕೆ ಆಡಿಯೋ, ವೀಡಿಯೂ ಸಾಕ್ಷಿಗಳಿಲ್ಲ