ನವದೆಹಲಿ: ಸಿವಿಲ್ ನ್ಯಾಯಾಧೀಶರಾಗಲು ಕನಿಷ್ಠ ೩ ವರ್ಷಗಳ ಕಾನೂನು ಪ್ರಾಕ್ಟೀಸ್ ಮಾಡಿರುವುದು ಕಡ್ಡಾಯ ಎಂದು ಸ್ಪಷ್ಟ ಪಡಿಸಿರುವ ಸುಪ್ರೀಂ ಕೋರ್ಟ್, ನ್ಯಾಯಾಧೀಶರಿಗೆ ಕಾನೂನು ಕ್ಲರ್ಕ್ ಆಗಿ ಸೇವೆ ಸಲ್ಲಿಸಿರುವುದನ್ನೂ ಪರಿಗಣಿಸಲಾಗುತ್ತದೆ ಎಂದಿದೆ. ಈಗಾಗಲೇ ರಾಜ್ಯಗಳು/ಹೈಕೋರ್ಟ್‌ಗಳು ನೋಟಿಫೈ ಮಾಡಿರುವ ನೇಮಕಾತಿಗಳಿಗೆ ಇದು ಅನ್ವಯ ವಾಗುವು ದಿಲ್ಲ. ಆದರೆ ಮುಂದಿನ ನೇಮಕಾತಿಗಳಿಗೆ ಪರಿಗಣಿಸಲಾಗುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯ್, ನ್ಯಾಯಮೂರ್ತಿಗಳಾದ ಎ.ಜಿ.ಮಸೀಹ್ ಮತ್ತು ವಿನೋದ್ ಚಂದ್ರನ್ ಅವರ ಪೀಠ ಆದೇಶಿಸಿದೆ. ಒಂದು ದಿನ ಪ್ರಾಕ್ಟೀಸ್ ಕೂಡ ಇಲ್ಲದ ಕಾನೂನು ಪದವೀಧರ ರನ್ನು ನ್ಯಾಯಾಂಗ ಸೇವೆಗೆ ನೇಮಕಾತಿ ಮಾಡುವುದರಿಂದ ಸಮಸ್ಯೆಗಳು ಉದ್ಭವವಾಗುತ್ತವೆ ಎಂದಿದ್ದಾರೆ.