ಸಿನಿಮೀಯ ರೀತಿಯಲ್ಲಿ ಆರೋಪಿ ಪರಾರಿ

0
21

ಕುಷ್ಟಗಿ: ಬೊಲೆರೋ ವಾಹನ ಕಳ್ಳತನ ಮಾಡಿದ್ದ ಆರೋಪಿಯೊಬ್ಬ ಪೊಲೀಸರು ಅದೇ ಗಾಡಿಯಲ್ಲಿ ಕರೆದುಕೊಂಡು ಹೋಗುವಾಗ ಸಿನಿಮೀಯ ರೀತಿಯಲ್ಲಿ ಪರಾರಿಯಾದ ಘಟನೆ ಕುಷ್ಟಗಿ ತಾಲೂಕಿನ ತಾವರಗೇರಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಯನ್ನು ಸಿಂಧನೂರಿನ ಸಂತೋಷ ಉಪ್ಪಾರ ಎಂದು ಗುರುತಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಬೊಲೆರೋ ವಾಹನ ಕಳ್ಳತನವಾಗಿದ್ದಕ್ಕೆ ಪ್ರಕರಣ ದಾಖಲಿಸಿಕೊಂಡ ಅಲ್ಲಿಯ ಪೊಲೀಸರು ಆರೋಪಿಯ ಪತ್ತೆಹಚ್ಚಲು ಸಿಂಧನೂರಿಗೆ ಬಂದಾಗ ಸಂತೋಷ ಎಂಬ ವ್ಯಕ್ತಿ ಮೇಲೆ ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ವಿಚಾರಣೆಗೆಂದು ಮುಧೋಳಕ್ಕೆ ಅದೇ ಬೊಲೆರೋ ವಾಹನದಲ್ಲಿ ಕರೆದುಕೊಂಡು ಬರುವಾಗ ಸಮೀಪದ ಹಂಚಿನಾಳ ಹತ್ತಿರದ ಟೋಲ್‌ಗೇಟ್ ಹತ್ತಿರ ಮೂತ್ರ ವಿಸರ್ಜನೆಗೆಂದು ಸುಳ್ಳು ಹೇಳಿ, ಕೆಳಗೆ ಇಳಿದಿದ್ದಾನೆ. ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ. ಆರೋಪಿಯ ಎಡಗೈ ಮೇಲೆ ರಕ್ಷಿತಾ ಎಂಬ ಹಚ್ಚೆ ಗುರುತು ಇದೆ ಎಂದು ತಿಳಿದುಬಂದಿದೆ.

Previous articleಪ್ರೀತಿಸಿ ಕೈಕೊಟ್ಟ ಪ್ರಿಯಕರ-ಯುವತಿಯಿಂದ ದೂರು
Next articleಆಲಮಟ್ಟಿಗೆ ಒಳಹರಿವು ಆರಂಭ