ವಾಲ್ಮೀಕಿ ನಿಗಮ ಹಗರಣ ಸಿಎಂ ಗೆ ಗೊತ್ತಿದ್ದೇ ನಡೆದ ಹಗರಣ: ಕೇಂದ್ರ ಸಚಿವ ಜೋಶಿ ವಾಗ್ದಾಳಿ
ಹುಬ್ಬಳ್ಳಿ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಗೊತ್ತಿದ್ದೇ ನಡೆದಿರುವ ಬಹುದೊಡ್ಡ ಹಗರಣ. ಶೇ 100% ಭ್ರಷ್ಟ ಸರ್ಕಾರ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೈಕಮಾಂಡ್ ಹಾಗೂ ರಾಹುಲ ಗಾಂಧಿ ಅವರ ಬೆಂಬಲದಿಂದ ಬಹುದೊಡ್ಡ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಗಂಭೀರವಾದುದು. ಸಿದ್ಧರಾಮಯ್ಯನವರಿಗೆ ಗೊತ್ತಿದ್ದೇ ನಡೆದಿರುವ ಹಗರಣವಾಗಿದೆ. ತೆಲಂಗಾಣ ಚುನಾವಣೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಾವಿರಾರು ಕೋಟಿ ಹಣ ರವಾನಿಸಿದೆ ಎಂದು ನಾವು ( ಬಿಜೆಪಿಯವರು ) ಹೇಳಿದ್ದೆವು. ಅದಕ್ಕೆ ಕಾಂಗ್ರೆಸ್ ನವರು ಆಕ್ಷೇಪಿಸಿದ್ದರು. ಹಿಂದೆ ಇದ್ದ ನಮ್ಮ ಬಿಜೆಪಿ ಸರ್ಕಾರಕ್ಕೆ ಏನೂ40 % ಸರ್ಕಾರ ಎಂದು ಟೀಕಿಸಿದ್ದರು. ಏನೂ ಆಧಾರ ಇಲ್ಲದೇ ಆರೋಪಿಸಿದ್ದರು. ಈ ಬಗ್ಗೆ ಮಾನ ನಷ್ಟ ಪ್ರಕರಣ ದಾಖಲಿಸಿದ್ದು, ಬೇಲ್ ಪಡೆದು ಹೊರಗಿದ್ದಾರೆ. ಅವರಿಗೆ ಶಿಕ್ಷೆ ಆಗುತ್ತೆ ಎಂದು ಸಚಿವ ಜೋಶಿ ಹೇಳಿದರು.
ಆದರೆ, ಈಗ ಸಿದ್ದರಾಮಯ್ಯ ಸರ್ಕಾರವು 100% ಭ್ರಷ್ಟಾಚಾರ ಸರ್ಕಾರ ಎಂಬುದು ವಾಲ್ಮೀಕಿ ನಿಗಮದ ಹಗರಣದಿಂದ ಗೊತ್ತಾಗಿದೆ. ನಿಗಮದ ಅಕೌಂಟ್ ನಲ್ಲಿದ್ದ ನೂರಾರು ಕೋಟಿ ಹಣವನ್ನು ತಿಂದು ಹಾಕಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.