ಕಲಬುರಗಿ: ʻಸಿಎಂ ಸಿದ್ದರಾಮಯ್ಯ ಪಾಕಿಸ್ತಾನದ ಏಜೆಂಟ್, ಅವನಿಗೆ ಮಾನ ಮಾರ್ಯಾದೆ ಏನಾದರೂ ಇದೆಯಾ?ʼ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ವಿರುದ್ಧ ಯುದ್ಧ ಮಾಡಬಾರದು, ಭದ್ರತೆ ಹೆಚ್ಚಿಸಬೇಕು ಎನ್ನುವ ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಿಮ್ಮ ಧರ್ಮ ಯಾವುದು ಅಂತ ಕೇಳಿ ಫೈರಿಂಗ್ ಮಾಡಿದ್ದಾರೆ. ಕಾಂಗ್ರೆಸ್‌ಗೆ ಹಿಂದುಗಳು ವೋಟ್ ಹಾಕಿಲ್ವ? ಕೇವಲ ಸಾಬುರುಗಳೇ ವೋಟ್ ಹಾಕಿದ್ದಾರಾ? ಸಾಬರ ಎಂಜಲು ತಿನ್ನೊ ಪಾರ್ಟಿ ಕಾಂಗ್ರೆಸ್. ಅವರಿಗೆ ದೇಶ, ಧರ್ಮ ಮುಖ್ಯವಲ್ಲ ಎಂದು ಹರಿಹಾಯ್ದರು.
ಇನ್ನಾದರೂ ನಮ್ಮ ಹಿಂದುಗಳು, ಸನಾತನರು ಒಂದಾಗಬೇಕು. ನಮ್ಮ ದೇಶದ ಸುರಕ್ಷತೆ ಪ್ರಧಾನಿ ಮೋದಿಯವರ ಕೈಯಲ್ಲಿದೆ. ಶೀಘ್ರವೇ ಪಾಕಿಸ್ತಾನಕ್ಕೆ ಪಾಠ ಕಲಿಸ್ತಾರೆ ಎಂದು ಯತ್ನಾಳ ಭರವಸೆ ವ್ಯಕ್ತಪಡಿಸಿದರು.