ಬಳ್ಳಾರಿ: ಇಡೀ ರಾಜ್ಯ ಸರಕಾರವೇ ಇಲ್ಲಿ ಬಂದು ಕುಳಿತಿದೆ, ಸಿಎಂ ಸಿದ್ದರಾಮಯ್ಯ ಪಂಜರಗಿಣಿ ಆಗಿದ್ದಾರೆ. ಹಳೆ ಸಿದ್ದರಾಮಯ್ಯ ಈಗ ಇಲ್ಲ, ಅವರಲ್ಲಿ ಶಕ್ತಿ ಕಳೆದಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ತೋರಣಗಲ್‌ನ ಖಾಸಗಿ ಹೋಟೆಲ್‌ನಲ್ಲಿ ಮಾತನಾಡಿದ ಅವರು. ಮುಡಾದಲ್ಲಿ ತಪ್ಪು ಮಾಡದೇ ಇದ್ದರೆ ಸೈಟು ಯಾಕ ವಾಪಸ್ಸು ಕೊಟ್ರಿ? ಮೂರ್ನಾಲ್ಕು ಜನರ ಮಾತು ಕೇಳಿ ತಪ್ಪು ನಿರ್ಧಾರ ತಗೊಳ್ತಾ ಇದಾರೆ. ಸರಕಾರ ಬಂದು ಕುಳಿತರೆ ಕಾಂಗ್ರೆಸ್ ಗೆಲ್ಲಲಿದೆ ಎನ್ನುವ ಭಾವನೆ ಇದೆ. ಆದರೆ ಇದು ಅಸಾಧ್ಯ ಎಂದರು.