ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವವರೆಗೆ ಮುಸ್ಲಿಮರು ಏನಾದರೂ ಮಾಡಿಕೊಳ್ಳಿ. ಅವರ ನಂತರ ನಮಗೆ ಚಂಬೇ ಗತಿಯಾಗುತ್ತದೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರತಿ ಆರು ತಿಂಗಳಿಗೊಮ್ಮೆ ಹೋಗಿ, ನೂರು ಕೋಟಿ ರೂ. ಅನುದಾನ ತರಬೇಕು. ಅನುದಾನ ತಂದು, ಸಮಾಜದ ಕೆಲಸ ಮಾಡಿಕೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಹೇಬರು ಇರುವವರೆಗೆ ನಾವು, ನೀವು ನಮ್ಮ ಸಮಾಜ ಏನಾದರೂ ಮಾಡಿಕೊಳ್ಳಬೇಕು. ಇನ್ನು ನನಗೆ ಸಿದ್ದರಾಮಯ್ಯ ಮಾತ್ರ ನಾಯಕ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಕೂಡಾ ನಾನು ನನ್ನ ನಾಯಕ ಎಂದು ಒಪ್ಪಿಕೊಂಡಿಲ್ಲ ಎಂದರು.