ಜಾಲಹಳ್ಳಿ; ಸಿಡಿಲು ಬಡೆದು ಕುರಿಗಾಹಿ ಬಾಲಕನೊರ್ವ ಸ್ಥಳ ದಲ್ಲಿಯೇ ಸಾವನ್ನಪ್ಪಿದ ಘಟನೆ ಸೋಮವಾರ ಸಂಜೆ ಬಿ.ಆರ್ ಗುಂಡ ಗ್ರಾಮದಲ್ಲಿ ನಡೆದಿದೆ.
ಮೃತ ಕುರಿಗಾಹಿ ಬಾಲಕ ಹನಮಗೌಡ ನಾಯಕ (16) ಎಂದು ಗುರುತಿಸಲಾಗಿದೆ. ಮೃತಪಟ್ಟ ಕುರಿಗಾಯಿ ಬಾಲಕನಾಗಿದ್ದಾನೆ. ಎಂದಿನಂತೆ ಕುರಿಗಳ ಹಿಂಡನ್ನು ಮೇಯಿಸಲು ಹೊಲಕ್ಕೆ ಹೋದ ಸಮಯದಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ-ಮಳೆಯಾಗಿದ್ದು ಈ ವೇಳೆ ಜಮೀನಿನಲ್ಲಿ ಮೇಯಿತಿದ್ದ ಕುರಿಗಳನ್ನು ಒಂದು ಗೂಡಿಸುವ ಸಮಯದಲ್ಲಿ ಏಕಾಏಕಿ ಸಿಡಿಲು ಅಪ್ಪಳಿಸಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.