ಸಿಡಿಲು ಬಡಿದು ಸಹೋದರರ ದುರ್ಮರಣ

0
12
ಸಿಡಿಲು

ಶಿವಮೊಗ್ಗ: ನಿನ್ನೆ ರಾತ್ರಿ ಸುರಿದ ಮಳೆಯಲ್ಲಿ ಸಿಡಿಲು ಬಡಿದು ಸಹೋದರರು ಸಾವಿಗೀಡಾದ ಘಟನೆ ನಡೆದಿದೆ.
ಗೌಳಿಗರ ಕ್ಯಾಂಪ್ ನಿವಾಸಿಗಳಾದ ಬೀರು (32) ಮತ್ತು ಸುರೇಶ್ (35) ಮೃತಪಟ್ಟ ದುರ್ದೈವಿಗಳು. ಜಮೀನಿನಲ್ಲಿ ಭತ್ತ ಕಟಾವ್ ಮಾಡಿ ರಾಶಿ ಹಾಕಿದ್ದರು. ಭತ್ತವನ್ನು ರಕ್ಷಿಸಲು ಜಮೀನಿಗೆ ತೆರಳಿದ್ದರು. ಈ ಸಂದರ್ಭ ಸಿಡಿಲು ಬಡಿದು ಬೀರು ಮತ್ತು ಸುರೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಜಮೀನಿಗೆ ಹೋದ ಸಹೋದರರು ತುಂಬಾ ಹೊತ್ತಾದರೂ ವಾಪಸ್ಸಾಗದ ಹಿನ್ನೆಲೆಯಲ್ಲಿ ಮನೆಮಂದಿ ಜಮೀನಿನ ಬಳಿ ಹುಡುಕಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹಗಳನ್ನು ಭದ್ರಾವತಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Previous article“ಕುಟುಂಬ ಪ್ರೇಮ ಮೆರೆದ ಸವಿಕ್ಷಣಗಳು”
Next articleಡಿ.ಕೆ ಶಿವಕುಮಾರ್‌ಗೆ ಹೈಕೋರ್ಟ್‌ ಬಿಗ್‌ ರಿಲೀಫ್‌