ಯಾದಗಿರಿ: ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ಬಿದ್ದ ಸಿಡಿಲಿಗೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬ ಬಲಿಯಾದ ಘಟನೆ ಗುರುಮಠಕಲ್ ತಾಲೂಕಿನ ಸೈದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಯಲಸತ್ತಿಯಲ್ಲಿ ನಡೆದಿದೆ.
ದೇವಪ್ಪ(35) ಎಂಬ ರೈತನೇ ಸಿಡಿಲಿಗೆ ಬಲಿಯಾದ ನತದೃಷ್ಟ. ಬಿಡಿಸಿಟ್ಟ ಹತ್ತಿ ಬೆಳೆಯನ್ನು ವಾಹನದಲ್ಲಿ ತುಂಬುವಾಗ ಎರಗಿದ ಸಿಡಿಲು ಇತನನ್ನು ಆಹುತಿ ಪಡೆದಿದೆ.