ಸಿಡಿಲಿಗೆ ಕೊಪ್ಪಳದ ಇಬ್ಬರು ಬಲಿ

ಕೊಪ್ಪಳ: ನಗರದಲ್ಲಿ ಗುರುವಾರ ಮಳೆ ಸುರಿಯುವ ವೇಳೆ ಸಿಡಿಲು ಬಡಿದು, ವ್ಯಕ್ತಿಗಳಿಬ್ಬರು ಸಾವನ್ನಪ್ಪಿದ್ದಾರೆ.

ಮೃತರನ್ನು ನಗರದ ೮ನೇ ವಾರ್ಡಿನ ಕೋಟೆ ಏರಿಯಾದ ಗೌರಿ ಅಂಗಳದ ನಿವಾಸಿ ಮಂಜುನಾಥ ಗಾಳಿ(೪೮) ಮತ್ತು ಗೋವಿಂದಪ್ಪ ಮ್ಯಾಗಳಮನಿ ಎಂದು ಗುರುತಿಸಲಾಗಿದೆ.

ಗುರುವಾರ ಸಂಜೆ ಭೀಕರವಾಗಿ ಗುಡುಗು ಸಹಿತ ಮಳೆ ಸುರಿದಿದ್ದು, ಇದರಿಂದಾಗಿ ಇಬ್ಬರು ಸಿಡಿಲಿಗೆ ಬಲಿಯಾಗಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.