ಸಿಡಿಲಿಗೆ ಓರ್ವ ಯುವಕ ಬಲಿ

0
11

ಹಾವೇರಿ: ಜಿಲ್ಲೆಯ ವಿವಿಧೆಡೆ ಸಿಡಿಲು ಸಹಿತ ಮಳೆ ಸುರಿದಿದ್ದು, ಸಿಡಿಲಿಗೆ ಓರ್ವ ಯುವಕ ಬಲಿಯಾಗಿರುವ ಘಟನೆ ಗುರುವಾರ ಸಂಭವಿಸಿದೆ.
ತಾಲೂಕಿನ ಕುರುಬಗೊಂಡ ಗ್ರಾಮದ ದಯಾನಂದ (22) ಸಿಡಿಲಿಗೆ ಬಲಿಯಾಗಿರುವ ಯುವಕ. ಗುರುವಾರ ಸಂಜೆ ವೇಳೆ ಗಾಳಿ, ಗುಡುಗಿನ ಆರ್ಭಟಕ್ಕೆ ಮರದ ಕೆಳಗೆ ನಿಂತಿದ್ದ ದಯಾನಂದನಿಗೆ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರೇಕೆರೂರ, ಬ್ಯಾಡಗಿ, ಶಿಗ್ಗಾವಿ, ಹಾನಗಲ್ಲ ಭಾಗದಲ್ಲಿ ಉತ್ತಮ ಮಳೆಯಾಗಿದೆ.

Previous articleಅಬ್ಬಾ ಎಂಥಾ ಮೇಕಪ್‌ ಎಂದ ಮೋದಿ
Next articleರೈಲಿನಲ್ಲಿ ಮುಸುಕುಧಾರಿಗಳ ದಾಳಿ: ಓರ್ವ ಸಾವು, ಹಲವರಿಗೆ ಗಾಯ