ಸಿಎಂ‌ ದಾಖಲೆ ಇಟ್ಟುಕೊಂಡು ಆರೋಪ ಮಾಡಲಿ

0
38

ನಿಮಗೆ ಸಿಬಿಐ ಬಗ್ಗೆ ಈಗ ಯಾಕೆ ವಿಶ್ವಾಸ ಬಂದಿದೆ

ಬೆಳಗಾವಿ: ಮುಖ್ಯಮಂತ್ರಿಗಳು ಯಾರದ್ದೋ ಮಾತುಕೇಳಿ ಮಾತನಾಡುವುದು ಸರಿ ಅಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾನಾಡಿ ಸಿಎಂ‌ ಆರೋಪ ಮಾಡಬೇಕಾದರೆ ದಾಖಲೆ ಇಟ್ಟುಕೊಂಡು ಆರೋಪ ಮಾಡಲಿ ಅದು ಬಿಟ್ಟು ಯಾರದ್ದೋ ಮಾತುಕೇಳಿ ಮಾತನಾಡುವುದು ಸರಿ ಅಲ್ಲ. ಅದೇ ಅನ್ವರ್ ಮಾನಿಪಾಡ್ಡಿ ಬಿಜೆಪಿಯವರು ನನ್ನ ಸಂಪರ್ಕ ಮಾಡಿಲ್ಲ‌ ಅಂತಾ ಸ್ಪಷ್ಟನೆ ನೀಡಿದ್ದಾರೆ, ಈಗ ಸಿಎಂ ಸಿದ್ದರಾಮಯ್ಯ ಏನು ಹೇಳ್ತಾರೆ? ಸುಮ್ಮನೆ ಬ್ಲ್ಯಾಕ್ ಮೇಲೆ ಮಾಡೊದು ಅಂಜಿಸೋದು ಆಗಬಾರದು. ಸದನದಲ್ಲಿ ವಿರೋಧಪಕ್ಷದವರು ಮಾತನಾಡಲೇಬಾರಾದಾ? ಸದನದಲ್ಲಿ ನಮ್ಮನ್ನು ಕಟ್ಟಿ ಹಾಕಿದ್ರೆ ಆಯ್ತು ನಮ್ಮನ್ನು ಬಾಯಿ‌ಮುಚ್ಚಿಸಿದ್ರೆ ಆಯ್ತು ಅಂತ ತಿಳಿದುಕೊಂಡಿದ್ದಾರೆ. ನಾವು ಗಟ್ಟಿಯಾಗಿದ್ದೇವೆ, ನೀವು ತನಿಖೆ ಮಾಡುವಂತೆ ಮೊನ್ನೆಯೆ ಹೇಳಿದ್ದೇವೆ. ನಿಮಗೆ ಸಿಬಿಐ ಬಗ್ಗೆ ಈಗ ಯಾಕೆ ವಿಶ್ವಾಸ ಬಂದಿದೆ, ಸಮಸ್ಯೆಯನ್ನ ಕ್ಯಾಬಿನೆಟ್‌ನಲ್ಲಿ ಇಡಿ, ಶಿಫಾರಸು ಮಾಡಿ ಸಿಬಿಐ ತಾನೆ ತನಿಖೆ ಮಾಡುತ್ತಾರೆ. ನಿಮಗೆ ತನಿಖೆ ಮಾಡಿಸೋದು ಬೇಕಾಗಿಲ್ಲ, ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದೀರಿ ಎಂದರು.

Previous articleಅವರು ಹೇಳಿಕೆ ಬದಲಿಸಿದರೆ ಏನು ಮಾಡಬೇಕು?
Next articleಡ್ರೋನ್‌ ಪ್ರತಾಪ್‌ಗೆ ನ್ಯಾಯಾಂಗ ಬಂಧನ