ಸಿಎಂ, ಡಿಸಿಎಂ ಹುದ್ದೆ ಖಾಲಿ‌ ಇಲ್ಲ: ಲಾಡ್

0
27

ಹುಬ್ಬಳ್ಳಿ: ಸಿಎಂ, ಡಿಸಿಎಂ ಹುದ್ದೆ ಸಧ್ಯಕ್ಕೆ ಖಾಲಿ ಇಲ್ಲ. ಒಕ್ಕಲಿಗ ಶ್ರೀಗಳ ಹೇಳಿಕೆಗೆ ಮುಖ್ಯಮಂತ್ರಿಗಳು ಈಗಾಗಲೇ ಸ್ಪಷ್ಟಿಕರಣ ಕೊಟ್ಟಿದ್ದಾರೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಗೋದು ಸುಲಭವಲ್ಲ. ಹೈಕಮಾಂಡ, ಎಲ್ಲ ಶಾಸಕರು ನಿರ್ಧಾರದ ಮೇಲೆ ಆಗಬೇಕು. ಹೈಕಮಾಂಡ ಏನು ತೀರ್ಮಾನ ಮಾಡಿರುತ್ತೆ ಅದೇ ಫೈನಲ್. ಅದಕ್ಕೆ ಸಿಎಂ ಸ್ಪಷ್ಟನೆ ನೀಡಿದ್ದಾರೆ ಎಂದರು.
ಸರ್ಕಾರ ನಡೆಸಬೇಕಾದ್ರೆ ದರ ಏರಿಸಲೇಬೇಕು. ಹಾಲಿನ ದರದ ಬಗ್ಗೆ ಈಗಾಗಲೇ ಸಿಎಂ ಅವರು ಸ್ಪಷ್ಟೀಕರಣ ಕೊಟ್ಟಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹಾಲು, ಪೆಟ್ರೋಲ್ ಡಿಸೇಲ್ ದರ ಎಲ್ಲವೂ ಕಡಿಮೆ ಇದೆ. 60 ಸಾವಿರ ಕೋಟಿ ರೂಪಾಯಿಯನ್ನು ನಾವು ಗ್ಯಾರಂಟಿಗೆ ಕೊಡಬೇಕಾಗುತ್ತೆ. ಅದಕ್ಕಾಗಿ ಏರಿಕೆ ಮಾಡಬೇಕು. ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರ ಎಷ್ಟು ಜಾಸ್ತಿ ಮಾಡಿದೆ. ಅದರ ಬಗ್ಗೆ ಮಾತಾಡೋದು ಬೇಡ್ವಾ. ನಿರ್ಮಲಾ ಸೀತಾರಮನ್ ಇದರ ಬಗ್ಗೆ ಮಾತಾಡಬೇಕು. ಅವರು ದೇಶ ನಡೆಸಬೇಕಾದ್ರೆ, ನಾವು ರಾಜ್ಯ ನಡೆಸಬೇಕೆಂದು ಬೆಲೆ ಏರಿಕೆಯನ್ನು ಸಮರ್ಥನೆ ಮಾಡಿಕೊಂಡರು.ಆರೋಪ ಮಾಡುವುದು ಬಿಜೆಪಿ ಅವರ ಕೆಲಸ. ರಾಮ ಮಂದಿರ ಸೋರುತ್ತಿದೆ ಅದನ್ನ ಯಾರ ಹೋಗಿ ನಿಲ್ಲಿಸಬೇಕು. ನೀಟ್ ಪೇಪರ್ ಲೀಕ್ ಆಯಿತು ಅದರ ಬಗ್ಗೆ ಯಾರು ಮಾತಾಡೋದ ಬೇಡ್ವಾ ಎಂದರು. ಬರ ಪರಿಹಾರದ ವಿಚಾರಕ್ಕೆ ಮಾತನಾಡಿ, ನಾವು ಸರ್ಕಾರ ನಡೆಸ್ತಾ ಇದ್ದು ಒಂದು ವರ್ಷ ಆಯ್ತು, ಕೇಂದ್ರ ಸರ್ಕಾರದ ಹತ್ತು ವರ್ಷಗಳಲ್ಲಿ ಯಾವುದೇ ಲೋಪದೋಷಗಳು ಇಲ್ವಾ. ಬೆಲೆ ಏರಿಕೆ, ಎಂಪ್ಲಾಯಮೆಂಟ್, ಜಿಡಿಪಿ ಇವು ಯಾವುದು ಅವರ ಕಾಣ್ತಿಲ್ಲಾ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

Previous articleಮೇಯರ್, ಉಪ ಮೇಯರ್ ಸ್ಥಾನಕ್ಕೆ 5 ನಾಮಪತ್ರ ಸಲ್ಲಿಕೆ
Next articleಚಾಕುವಿನಿಂದ ಇರಿದು ಆಟೋ ಚಾಲಕನ ಬರ್ಬರ ಹತ್ಯೆ