ಸಿಎಂ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ

0
12

ಕೊಪ್ಪಳ: ರಾಜಕೀಯವಾಗಿ ಸಿದ್ದು ಹೆಸರು ಕೆಡಿಸಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಬ್ರಾಹಂ ಒಬ್ಬ ಬ್ಲಾಕ್ ಮೇಲರ್ ಆಗಿದ್ದು ಈ ಮುಂಚೆ ಆತ ಯಡಿಯೂರಪ್ಪ ಸೇರಿದಂತೆ ಹಲವರ ಮೇಲೆ ಆರೋಪ ಮಾಡಿದ್ದಾನೆ. ಸಿಎಂ ಮೇಲೆ ಕೇಸ್ ಹಾಕಲು ಅಬ್ರಹಂ ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾನೆ. ರಾಜ್ಯಪಾಲರು ರಾಜಕೀಯ ಒತ್ತಡಕ್ಕೆ ಮಣಿದು ಸಿಎಂಗೆ ನೋಟಿಸ್ ಕೊಟ್ಟಿದ್ದಾರೆ. ರಾಜ್ಯಪಾಲರು ಅನುಮತಿ ಕೊಡಲು ಬರುವುದಿಲ್ಲ. ರಾಜ್ಯಪಾಲರು ಸಿಎಂ ವಿರುದ್ದ ಪ್ರಕರಣ ದಾಖಲಿಸಲು ಅನುಮತಿ ಕೊಡಲಾಗದು. ಒಂದು ವೇಳೆ ಕೊಟ್ಟರೆ ನಾವು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತರುತ್ತೇವೆ. ಬಿಜೆಪಿ ಬೇಕಿದ್ದರೆ ಕೋರ್ಟ್‌ಗೆ ಹೋಗಲಿ. ನಾವು ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ತರುತ್ತೇವೆ. ಸಿಎಂ ಸಿದ್ದರಾಮಯ್ಯ ಅವರು ಅಭಿವೃದ್ಧಿ ಬದ್ದತೆಯ ನಾಯಕ. ಅವರ ಹೆಸರು ಕೆಡಿಸಲು ಬಿಜೆಪಿಗೆ ದುರುದ್ದೇಶ ಹೊಂದಿದೆ. ಸಿಎಂ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಮುಡಾ ಜಮೀನಿನಲ್ಲಿ ಸಿಎಂ, ಸರ್ಕಾರದ ಪಾತ್ರ ಏನೂ ಇಲ್ಲ. ಸಿಎಂ ಇದರಲ್ಲಿ ಪಾರದರ್ಶಕವಾಗಿದ್ದಾರೆ ಎಂದರು.

Previous articleಸುರಂಗ ಮಾರ್ಗದಲ್ಲಿ ಕಲ್ಲು ಕುಸಿತ: ಕಾರವಾರ ಟನೆಲ್ ಬಂದ್
Next articleವಯನಾಡ್ ದುರಂತ: 100 ಮನೆಗಳ ನಿರ್ಮಾಣಕ್ಕೆ ಸಿದ್ದರಾಮಯ್ಯ ಭರವಸೆ