ಬಳ್ಳಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಸುವ ಕೆಲಸ ಆರಂಭಿಸುವ ಸಿದ್ದತೆ ನಡೆದಿದೆ.
ಹೈದರಾಬಾದ್ ನ ತಜ್ಞ ಕನ್ನಯ್ಯ ನಾಯ್ಡು ಈಗಾಗಲೇ ಜಲಾಶಯಕ್ಕೆ ಬಂದಿದ್ದು ನೂತನವಾಗಿ ಸಿದ್ದಗೊಂಡ ಕ್ರಸ್ಟ್ ಗೇಟ್ ಅಳವಡಿಕೆ ಬಗ್ಗೆ ಪರೀಶಿಲನೆ ನಡೆಸಿದ್ದಾರೆ. ರೈಲು ಟ್ರ್ಯಾಕ್ ಮಾದರಿಯಲ್ಲಿ ಫ್ಲಾಟ್ ಫಾಮ್೯ಗಳನ್ನು ನಿರ್ಮಾಣ ಮಾಡಿಕೊಂಡು ಕ್ರೇನ್ ಸಹಾಯದಿಂದ ನಿಯಮಿತ ತೂಕದ ಗೇಟ್ ಗಳನ್ನು ಹಂತಹಂತವಾಗಿ ಅಳವಡಿಸುವ ಕೆಲಸಕ್ಕೆ ಚಾಲನೆ ನೀಡಲಾಗುತ್ತದೆ. ಮೊದಲು ಒಂದು ಬದಿಯಲ್ಲಿ ಅಳವಡಿಕೆಯಾಗುವ ಗೇಟ್‌ಗಳ ತಡೆ, ನೀರಿನ ರಭಸ, ಗೇಟ್ ತಡೆಯುವಿಕೆ ಆಧಾರದ ಮೇಲೆ ಹಂತ ಹಂತವಾಗಿ ಕೆಲಸ ನಡೆಯಲಿದೆ.