ಕೊಪ್ಪಳ: ತಾಲ್ಲೂಕಿನ ಮುನಿರಾಬಾರ್ ಬಳಿಯ ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟಿಗೆ ಬೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪೊಲೀಸರು ಕೊಡೆ ಹಿಡಿದು, ನೆರಳು ಮಾಡಿದರು.
ಬಿಸಿಲು ನಾಡು ಎಂದೇ ಕರೆಸಿಕೊಳ್ಳುವ ಕೊಪ್ಪಳದಲ್ಲಿರುವ ತುಂಗಭದ್ರ ಜಲಾಶಯದ ಮೇಲೆ ಮಂಗಳವಾರ ಹೆಚ್ಚು ಬಿಸಿಲಿತ್ತು. ಹಾಗಾಗಿ ಸ್ವಲ್ಪ ಹೊತ್ತು ಹಾಗೆಯೇ ಇದ್ದರು. ಬಳಿಕ ಪೊಲೀಸರು ಮುಖ್ಯಮಂತ್ರಿ ತಲೆಮೇಲೆ ಛತ್ರಿಯನ್ನು ಹಿಡಿದರು. ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್ ವೀಕ್ಷಣೆ ಮಾಡಿ, ಪರಿಶೀಲಿಸಿದರು.