ಸಿಂಧೂರಕ್ಕೆ ಕೈ ಹಾಕಿದ ಉಗ್ರರಿಗೆ ತಕ್ಕ ಶಾಸ್ತಿ

0
33

ಚಿಕ್ಕಮಗಳೂರು: ಪಹಲ್ಲಾಮ್‌ನಲ್ಲಿ ಭಾರತೀಯರ ಸಿಂಧೂರಕ್ಕೆ ಕೈ ಹಾಕಿದ ಪಾಕ್ ಉಗ್ರರಿಗೆ ಆಪರೇಷನ್ ಸಿಂಧೂರದಿಂದ ತಕ್ಕ ಶಾಸ್ತಿಯಾಗಿದೆ ಎಂದು ಎಂಎಲ್‌ಸಿ ಸಿ.ಟಿ.ರವಿ ತಿಳಿಸಿದ್ದಾರೆ.

ಬುಧವಾರ ಸುದ್ದಿಗಾರದಿಗೆ ಮಾತನಾಡಿ ಭಾರತೀಯ ಸೇನೆ ಪ್ರತೀಕಾರ ತೆಗೆದುಕೊಂಡ ಬಗ್ಗೆ ಪಹಲ್ಲಾಮ್ ದಾಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಮಾತು ತಪ್ಪೋದಿಲ್ಲ ಎಂಬ ನಂಬಿಕೆ ಇತ್ತು. ಅಲ್ಲದೇ ಭಾರತೀಯ ಸೇನೆ ಮೇಲೂ ಅಪಾರವಾದ ನಂಬಿಕೆ ಇತ್ತು, 1971ರಲ್ಲಿ ಯುದ್ಧ ಗೆದ್ದೇವು. ಆದರೆ ಸಂಧಾನದಲ್ಲಿ ಸೋತಿದ್ದೇವು ಭಾರತೀಯ ಸಹೋದರಿ ಸಿಂಧೂರ ಅಳಿಸಲು ಬಂದವರನ್ನು ಅಳಿಸಿದ್ದೇವೆ ಎಂದು ಹೇಳಿದರು.

ಪ್ರಧಾನಿ ಮೋದಿ ಹಾಗೂ ಭಾರತೀಯ ಸಿಂಧೂರ ಎಂಬ ಹೆಸರಿಗೆ ಬೆಲೆ ತಂದುಕೊಟ್ಟಿದ್ದಾರೆ. ನಮ್ಮ ದೇಶದ ಸೈನಿಕರು ಪಾಕ್ ಉಗ್ರರನ್ನುಪೂರ್ಣ ನಿರ್ಣಾಮ ಮಾಡಿ, ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ. ಆದರೆ ಒಂದು ಸಲ ಭಯೋತ್ಪಾದಕರನ್ನು ಸಂಪೂರ್ಣವಾಗಿ ಮುಗಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಟ್ರೇಟ್ ಡಿಲೀಟ್ ಬಗ್ಗೆ ಮಾತನಾಡಿದ ಅವರು, ನಾಗರಿಕರ ನಡುವೆ ಶಾಂತಿ ಇರಬೇಕು. ಶತ್ರುಗಳನ್ನು ಮಟ್ಟ ಹಾಕುವುದು ಶಾಂತಿಯೇ, ಶ್ವಾಶತ ಶಾಂತಿಗೆ ಕಾರಣವಾಗುತ್ತದೆ. ರಾಜ್ಯ ಕಾಂಗ್ರೆಸ್ಸಿಗೆ ನಾನು ಸಹ ಟ್ವಿಟ್ ಮಾಡಿದ್ದೆ. ರಾಜ್ಯ ಕಾಂಗ್ರೆಸ್ ಟ್ವಿಟ್ ಡಿಲೀಟ್ ಮಾಡಿರುವುದನ್ನು ನೋಡಿದ್ದೇನೆ. ಇದು ಬದಲಾಗಿರುವ ಕಾಂಗ್ರೆಸ್ ಮನಸ್ಥಿತಿ ಎಂದರು.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಯೋಗ್ಯತೆಯನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಮೇಲೆ ಜನರಿಗೆ ಅಪನಂಬಿಕೆ, ಜಿಗುಪ್ಪೆಯನ್ನು ಮೂಡಿಸುತ್ತಿದೆ ಎಂದು ಕಿಡಿಕಾರಿದರು.

Previous articleಧಾರವಾಡ ಸೇರಿದಂತೆ 5 ಐಐಟಿಗಳ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಸಂಪುಟದ ಅನುಮೋದನೆ
Next articleಪ್ರಯಾಣಿಕರ ಗಮನಕ್ಕೆ: ಪಯಣಿಸುವ ಮುನ್ನ