ಉಡುಪಿ: ಪತ್ನಿ ಮೃತಪಟ್ಟ ಒಂದೇ ದಿನದಲ್ಲಿ ಪತಿ ಕೂಡಾ ಸಾವನ್ನಪ್ಪಿದ ಘಟನೆ ಇಲ್ಲಿಗೆ ಸಮೀಪದ ಉದ್ಯಾವರದಲ್ಲಿ ಸಂಭವಿಸಿದೆ.
ಉದ್ಯಾವರ ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ಹಾಗೂ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಲಾರೆನ್ಸ್ ಡೆಸಾ ಶುಕ್ರವಾರ ಮೃತಪಟ್ಟವರು. ಅವರ ಪತ್ನಿ ಶಿಕ್ಷಕಿ ಜುಲಿಯಾನಾ ಡೆಸಾ ಗುರುವಾರ ಇಹಲೋಕ ತ್ಯಜಿಸಿದ್ದರು.
ಪತ್ನಿಯ ಸಾವಿನಿಂದ ಆಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಲಾರೆನ್ಸ್ ಡೆಸಾ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.
ಲಾರೆನ್ಸ್ ಡೆಸಾ ಸ್ಥಳೀಯ ಲಯನ್ಸ್ ಕ್ಲಬ್ ಇನ್ನಿತರ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.
ಪತ್ನಿ ಜುಲಿಯಾನಾ ಡೆಸಾ ಅವರು ಕಾರ್ಕಳ ಬೈಲೂರು ಮೈನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.