ಹುಬ್ಬಳ್ಳಿ: ಅವರಿಬ್ಬರು ಸಂಸಾರದಲ್ಲಿ ಕಷ್ಟ ಸುಖ ಕಂಡಿದ್ದ ದಂಪತಿ. ಸುಧೀರ್ಘ ವೈವಾಹಿಕ ಜೀವನದ ನಡೆಸಿದ್ದ ದಂಪತಿ ಸೋಮವಾರ ಇಬ್ಬರೂ ಒಟ್ಟಿಗೆ ಸಾವಿನ ಮನೆ ಕದ ತಟ್ಟಿದ್ದು, ಇಂತಹ ಅಪರೂಪದ ಘಟನೆ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದೆ.
ಕುಸುಗಲ್ ಗ್ರಾಮದ ಶಂಕರಪ್ಪ ಹೊಂಬಳ(೭೨) ಹಾಗೂ ಪತ್ನಿ ಅನ್ನಪೂರ್ಣ ಹೊಂಬಳ(೬೨) ಇಬ್ಬರೂ ಸಾವಿನಲ್ಲೂ ಒಂದಾಗಿದ್ದಾರೆ. ಶಂಕರಪ್ಪ ಅವರು ಸೋಮವಾರ ಬೆಳಿಗ್ಗೆ ೬ ಗಂಟೆಗೆ ಹೃದಯಾಘತದಿಂದ ಮೃತಪಟ್ಟಿದ್ದಾರೆ. ಗಂಡನ ಸಾವಿನ ಸುದ್ದಿ ಕೇಳಿ ೧ ಗಂಟೆಯ ಸುಮಾರಿಗೆ ಪತ್ನಿ ಅನ್ನಪೂರ್ಣ ಮೃತಪಟ್ಟಿದ್ದಾರೆ. ಇವರಿಗೆ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗ ಇದ್ದಾರೆ. ಇವರ ಅಗಲಿಕೆಗೆ ಇಡೀ ಕುಸುಗಲ್ ಗ್ರಾಮಸ್ಥರು ಕಂಬನಿ ಮಿಡಿದಿದ್ದು, ಸಾರ್ವಜನಿಕರು ಪಾರ್ಥಿವ ಶರೀರದ ದರ್ಶನ ಪಡೆದರು.