ಸಾಲ ಬಾಧೆ: ರೈತ ಆತ್ಮಹತ್ಯೆ

0
32
ಆತ್ಮಹತ್ಯೆ

ಕುಳಗೇರಿ ಕ್ರಾಸ್: ಚಿಮ್ಮನಕಟ್ಟಿ ಗ್ರಾಮದ ರೈತ ಲಾಲಸಾಬ ದಾದೇಸಾಬ ಬಹದ್ದೂರಖಾನ್ ವ-೪೨ ಸಾಲದ ಹೊರೆ ತಾಳಲಾರದೆ ತನ್ನ ಮನೇಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದಾರೆ.

ಎರಡು ಏಕರೆ ಸ್ವಂತ ಜಮಿನು ಹೊಂದಿದ್ದ ರೈತ ಸರಿಯಾದ ಮಳೆ-ಬೆಳೆ ಇಲ್ಲದೆ ಸಾಲಮಾಡಿ ತಿರಿಸಲಾಗದೆ ಮಾನಸೀಕವಾಗಿ ಪರದಾಡುತ್ತಿದ್ದರು ಎಂದು ಪತ್ರಿಕೆಗೆ ತಿಳಿಸಿದ ಮೃತ ರೈತನ ಪತ್ನಿ ಬಿಸ್ಮೀಲ್ಲಾ ನನಗೆ ಇಬ್ಬರು ಮಕ್ಕಳಿದ್ದಾರೆ ಎಂದು ಅಳಲು ತೋಡಿಕೊಂಡರು.

ಕುಳಗೇರಿ ಕ್ರಾಸ್ ಡಿಸಿಸಿ ಬ್ಯಾಂಕ್‌ನಲ್ಲಿ ಜಮಿನು ಮೇಲೆ ಕೃಷಿ ಅಭಿವೃದ್ಧಿಗಾಗಿ ೫೭ ಸಾವಿರ ಕಾಕನೂರ ಎಸ್.ಬಿ.ಐ ಬ್ಯಾಂಕ್ ನಲ್ಲಿ ೧.೪೦ಲಕ್ಷ, ಹಾಗೂ ಕೈ ಸಾಲ ಸೇರಿದಂತೆ ಸಂಘಗಳಲ್ಲೂ ಸಾಲಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬಂದು ಪರಿಶೀಲನೆ ನಡೆಸಿ ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Previous articleಕಾಂಗ್ರೆಸ್‌ಗೆ ಷರತ್ತು ಬದ್ಧ ಬೆಂಬಲ: ಸಿದ್ದರಾಜು
Next articleಸಿಎಂಗೆ ಫ್ರೀ ಟಿಕೆಟ್ ಹಾರ ಅರ್ಪಣೆ