Home News ಸಾಲಭಾದೆಗೆ ಇಬ್ಬರ ರೈತರ ಆತ್ಮಹತ್ಯೆ

ಸಾಲಭಾದೆಗೆ ಇಬ್ಬರ ರೈತರ ಆತ್ಮಹತ್ಯೆ

ಕಲಬುರಗಿ: ಸಾಲಭಾದೆಗೆ ರೈತರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರತ್ಯೇಕ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕಾಳಗಿ ತಾಲೂಕಿನ ಕೊಡದೂರ ಗ್ರಾಮದಲ್ಲಿ ದತ್ತಾತ್ರೇಯ ಹುಣಚಪ್ಪ ಮೆಲಕೇರಿ(೫೫) ಎಂಬ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನಿಗೆ ಕಾಳಗಿ ಎಸ್‌ಬಿಐ ಶಾಖೆಯಲ್ಲಿ ೨ ಲಕ್ಷ ರೂ., ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಶಾಖೆಯಲ್ಲಿ ೫೦ ಸಾವಿರ ರೂ. ಹಾಗೂ ಖಾಸಗಿಯಾಗಿ ೧೦ ಲಕ್ಷ ರೂ. ಸಾಲ ಇತ್ತೆಂದು ತಿಳಿದುಬಂದಿದೆ. ಈ ಕುರಿತು ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಆಳಂದ ತಾಲ್ಲೂಕಿನ ಎಳೆನಾವದಗಿ ಗ್ರಾಮದಲ್ಲಿ ಅಶೋಕ(೪೮) ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರೈತ ಅಶೋಕ ಕೃಷಿ ಚಟುವಟಿಕೆಗಾಗಿ ೧೫ ಲಕ್ಷ ರೂ. ವರೆಗೂ ಸಾಲ ಮಾಡಿದ್ದ ಎಂದು ತಿಳಿದು ಬಂದಿದೆ. ಈ ಕುರಿತು ನರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version