ಸಾಲದ ಸುಳಿಗೆ ಸಿಲುಕಿದ ರೈತ ಆತ್ಮಹತ್ಯೆ

ಆತ್ಮಹತ್ಯೆ

ಕುಷ್ಟಗಿ: ಹೊಲದಲ್ಲಿ ಬಂದ ಬೆಳೆಯಿಂದ ಲಾಭ ಬಾರದ ಹಿನ್ನೆಲೆಯಲ್ಲಿ ಸಾಲ ಮಾಡಿದ್ದನ್ನು ತೀರಿಸಲಾಗದೆ ಮನನೊಂದು ರೈತನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.
ತಾಲೂಕಿನ ಟೆಂಗುಂಟಿ ಗ್ರಾಮದ ಶರಣಪ್ಪ ಚಂದಪ್ಪ ಕೌದಿ(42) ಮೃತ ರೈತ. ವಿವಿಧ ಖಾಸಗಿ ಬ್ಯಾಂಕ್‌ಗಳಲ್ಲಿ ಸಾಲ ತೆಗದುಕೊಂಡು ಒಕ್ಕಲುತನ ಮಾಡುತ್ತಿದ್ದ. ಸಾಲದ ಸುಳಿಗೆ ಸಿಲುಕಿಕೊಂಡಿದ್ದ ರೈತ ಗದಗ-ವಾಡಿ ರೈಲ್ವೆ ಮಾರ್ಗದ ಬ್ರಿಜ್ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಕಬ್ಬಿಣದ ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.