ಸಾಲದ ಬಾಧೆ : ಮಹಿಳೆ ನೇಣಿಗೆ ಶರಣು

0
132
ಆತ್ಮಹತ್ಯೆ

ಇಳಕಲ್ : ನಾಲ್ಕು ಮಕ್ಕಳ ಮದುವೆ ಮಾಡಬೇಕು ಎಂಬ ಆತಂಕದಲ್ಲಿ ಮಹಿಳೆಯೋರ್ವಳು ನೇಣಿಗೆ ಶರಣಾದ ಹೃದಯ ವಿದ್ರಾವಕ ಪ್ರಸಂಗ ಇಲ್ಲಿ ನಡೆದಿದೆ.
ಹಿರೇಕೊಡಗಲಿ ಗ್ರಾಮದ ೪೩ ವರ್ಷದ ಲಕ್ಷ್ಮೀ ಬಾಯಿ ಹವಾಲ್ದಾರ ಗಂಡ ಸತ್ತ ನಂತರ ನಾಲ್ಕು ಹೆಣ್ಣುಮಕ್ಕಳ ಮದುವೆ ಮಾಡಲು ಪ್ರಯತ್ನಪಟ್ಟು ಅದಕ್ಕಾಗಿ ಅಲ್ಲಲ್ಲಿ ಸಾಲವನ್ನು ಮಾಡಿಕೊಂಡಿದ್ದಾಳೆ. ಆದರೆ ಮದುವೆಗಳೂ ನಡೆದಿಲ್ಲ ಜೊತೆಗೆ ಸಾಲ ಕೊಟ್ಟವರ ಕಿರಿಕಿರಿ ಹೆಚ್ಚಾದಾಗ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ. ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪಿಎಸ್ಐ ಮಲ್ಲು ಸತ್ತಿಗೌಡರ ತನಿಖೆ ನಡೆಸಿದ್ದಾರೆ. ಹೆಣ್ಣು ಹೆತ್ತ ಲಕ್ಷ್ಮೀ ಬಾಯಿಯ ಈ ಸಾವು ಹಿರೇಕೊಡಗಲಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣ ಮಾಡಿತ್ತು.

Previous articleಚಾಲಕನ ಸಮೇತ ಸುಟ್ಟು ಕರಕಲಾದ ಕಾರು ಪತ್ತೆ
Next articleಕರ್ತವ್ಯನಿರತ ಪೊಲೀಸ್ ಪೇದೆಗೆ ಹಾರ್ಟ್ ಅಟ್ಯಾಕ್