ಸಾರಿಗೆ ಬಸ್ ಬೈಕ್‌ಗೆ ಡಿಕ್ಕಿ: ಸ್ಥಳದಲ್ಲೇ ಇಬ್ಬರು ಸಾವು.

0
14

ಮಳವಳ್ಳಿ: ಕೆಎಸ್ ಆರ್ ಟಿ ಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಳವಳ್ಳಿ ತಾಲ್ಲೂಕಿನ ಪಂಡಿತಹಳ್ಳಿ ಗ್ರಾಮದ ಬಳಿ ನಡೆದಿದೆ.
ತಾಲ್ಲೂಕಿನ ಮಂಚನಹಳ್ಳಿ ಗ್ರಾಮದ ನಾಗಸ್ವಾಮಿ(50) ದೊಡ್ಡಮಾದಯ್ಯ (65) ಮೃತಪಟ್ಟ ದುರ್ದೈವಿಗಳು, ಮೃತರಿಬ್ಬರು ಮಾರಮ್ಮ ದೇವಸ್ಥಾನದ ಅರ್ಚಕರಾಗಿದ್ದು , ಬೆಳಿಗ್ಗೆ ಧನುರ್ಮಾಸ ದೇವಸ್ಥಾನದ ಪೂಜೆ ಮುಗಿಸಿ ಮುಜರಾಯಿ ಇಲಾಖೆಯಲ್ಲಿ ಸಂಬಳದ ಬಗ್ಗೆ ವಿಚಾರಿಸಲು ಮಂಚನಹಳ್ಳಿ ಗ್ರಾಮದಿಂದ ಮಳವಳ್ಳಿಗೆ ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಮಳವಳ್ಳಿ ಕಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಯಿತು. ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Previous articleಪ್ರತಿಭಟನೆ ಮಾಡುವ ಹಕ್ಕಿದೆ ಆದರೆ ಗೀತೆಯ ಸಾರವನ್ನು …
Next articleಸಿಎಂ ಸಮ್ಮುಖದಲ್ಲಿ ನಕ್ಸಲ್ ಶರಣಾಗತಿ