ಶಿವಮೊಗ್ಗ: ಡ್ರ‍್ಯಾಗರ್ ಹಿಡಿದು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಡಾನ್ ಎಂದು ಬರೆದುಕೊಂಡಿದ್ದ ಇಬ್ಬರು ಯುವಕರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ವಶಕ್ಕೆ ಪಡೆದವರನ್ನ ಅಸ್ಗರ್ ಅಲಿ ಮತ್ತು ತಬ್ರೇಜ್ ಅಹ್ಮದ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಯುವಕರು ಡ್ರಾಗರ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಝಳಪಿಸುವಂತೆ ಫೋಸ್ ಕೊಟ್ಟುಕೊಂಡು ಇನ್‌ಸ್ಟಾಗ್ರಾಮ್‌ಗೆ ಹರಿ ಬಿಟ್ಟಿದ್ದರು. ಈ ವಿಡಿಯೋ ಸಾರ್ವಜನಿಕರನ್ನು ಭಯ ಬೀಳಿಸುವಂತೆ ಮಾಡಿದೆ ಎಂಬ ಆರೋಪದ ಅಡಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಸ್ಗರ್‌ಅಲಿ ಎಂಬಾತ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸಾಸಿವೆ ಹಳ್ಳಿ ಗ್ರಾಮದ ಯುವಕನಾಗಿದ್ದರೆ ತಬ್ರೇಜ್ ಅಲಿ ಎಂಬಾತ ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಜನತಾ ಕಾಲೋನಿಯ ನಿವಾಸಿಯಾಗಿದ್ದಾನೆ. ಇಬ್ಬರೂ ೧೯ ವರ್ಷ ವಯಸ್ಸಿನವರು. ಇಬ್ಬರಿಗೂ ನೋಟೀಸ್ ನೀಡಿದ ಪೊಲೀಸರು ಇವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.