ಆದಾಯವನ್ನ ಕಡೆಯ ಸ್ಥಾನದಲ್ಲಿಟ್ಟಿರುವುದೇ ಖರ್ಗೆ ಕುಟುಂಬದ ಸಾಧನೆ
ಬೆಂಗಳೂರು: ಕಲ್ಯಾಣ ಕರ್ನಾಟಕದ ಜನರ ತಲಾ ಆದಾಯವನ್ನ ಕಡೆಯ ಸ್ಥಾನದಲ್ಲಿಟ್ಟಿರುವುದೇ ಖರ್ಗೆ ಕುಟುಂಬದ ಸಾಧನೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ ಟೀಕಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಹಲವಾರು ದಶಕಗಳಿಂದ ಕಲ್ಯಾಣ ಕರ್ನಾಟಕದ ಜನತೆಯ ಋಣದಲ್ಲಿ ಕಲಬುರ್ಗಿಯಿಂದ ದಿಲ್ಲಿವರಗೆ ಸತತವಾಗಿ ಅಧಿಕಾರ ಅನುಭವಿಸುತ್ತ ಬಂದಿರುವ ಎಐಸಿಸಿ ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬ ಕಲ್ಯಾಣ ಕರ್ನಾಟಕದ ಜನರ ತಲಾ ಆದಾಯವನ್ನ ಕಡೆಯ ಸ್ಥಾನದಲ್ಲಿಟ್ಟಿರುವುದೇ ಅವರ ದೊಡ್ಡ ಸಾಧನೆ!
ತಮಗೆ ಸಂಬಂಧವಿಲ್ಲದ ವಿಚಾರಗಳಲ್ಲೂ ಅನಾವಶ್ಯಕವಾಗಿ ಮೂಗು ತೂರಿಸಿಕೊಂಡು ಬರುವ, ತಮ್ಮದಲ್ಲದ ಕೆಲಸಕ್ಕೂ ಕ್ರೆಡಿಟ್ ಪಡೆಯುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಈ ಕಳಪೆ ಸಾಧನೆ ಬಗ್ಗೆ ಏನು ಹೇಳುತ್ತಾರೆ?
ತಮ್ಮ ಚೀಫ್ ಕೈಯಲ್ಲಿ ಆರ್ಥಿಕ ಸಮೀಕ್ಷೆಯನ್ನು ಒಮ್ಮೆ ಫ್ಯಾಕ್ಟ್ ಚೆಕ್ ಮಾಡಿಸುತ್ತಾರಾ? ಅಥವಾ ಖರ್ಗೆ ಕುಟುಂಬದವರು ಮನಸ್ಸು ಮಾಡಿದರೆ ಇನ್ನು ಮುಂದೆ ಆರ್ಥಿಕ ಸಮೀಕ್ಷೆಗಳು ಕಲಬುರ್ಗಿ ಜಿಲ್ಲೆಗೆ ಕಾಲು ಇಡುವುದಕ್ಕೂ ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಾರಾ?
ಸಾಧನೆ ಮಾತಾಡಬೇಕು. ಮಾತೇ ಸಾಧನೆಯಾಗಬಾರದು, ಮಾನ್ಯ ಪ್ರಿಯಾಂಕ್ ಖರ್ಗೆ ಅವರೇ. ಇನ್ನು ಮುಂದಾದರೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಜನತಾ ಋಣ ತೀರಿಸಿ ಎಂದಿದ್ದಾರೆ.