ಸಾತ್ವಿಕ್ ಆರೋಗ್ಯದಲ್ಲಿ ಸ್ಥಿರ: ಆಸ್ಪತ್ರೆಯಲ್ಲೂ ಹರ್ಷ

0
22

ವಿಜಯಪುರ: ಕೊಳವೆ ಬಾವಿಯಲ್ಲಿ ಬಿದ್ದು ಅಪಾಯಕ್ಕೆ ಸಿಲುಕಿದ್ದ ಸಾತ್ವಿಕ್ ಅಮ್ಮನ ಎದೆಹಾಲು ಕುಡಿದು ಚಲ್ಲಾಟವಾಡಿದ್ದಾನೆ. ತನ್ನ ತೊದಲು ಮಾತುಗಳಿಂದ ದಾದಿಯರೊಂದಿಗೆ ಆಟವಾಡಿಕೊಂಡಿದ್ದಾನೆ. ಅಸ್ಪತ್ರೆಗೆ ಆಗಮಿಸಿ ಕಾಣ ಬಂದವರಿಗೆಲ್ಲ ಬೊಚ್ಚುಬಾಯಿ ನಗುವನ್ನು ತೋರಿ ಮುದ ನೀಡುತ್ತಿದ್ದಾನೆ…!
ಒಟ್ಟಾರೆಯಾಗಿ ಸಾತ್ವಿಕನ ಆರೋಗ್ಯ ಸಂಪೂರ್ಣ ಗುಣಮುಖವಾಗಿದೆ.
ವೈದ್ಯರು ೪೮ ಗಂಟೆಗಳ ಕಾಲ ನಿಗಾ ವಹಿಸಿದ್ದು ಇಂದು ಸಂಜೆ ನಾಲ್ಕು ಗಂಟೆಯವರೆಗೆ ಸಾತ್ವಿಕ ಆರೋಗ್ಯವನ್ನು ನಿರೀಕ್ಷಿಸಿ ಯಾವುದೇ ತೊಂದರೆ ಇಲ್ಲ. ಶನಿವಾ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸಾತ್ವಿಕ್‌ನನ್ನು ಜೀವಂತವಾಗಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಜಿಲ್ಲಾಡಳಿತ ನಂತರ ಮಗುವಿನ ಆರೋಗ್ಯದ ಬಗ್ಗೆಯೂ ಅಷ್ಟೇ ಕಾಳಜಿ ವಹಿಸಿಕೊಂಡಿತ್ತು. ಸಾತ್ವಿಕ್ ಪೂರ್ಣ ಪ್ರಮಾಣದಲ್ಲಿ ಆರೋಗ್ಯವಾಗಿದ್ದಾನೆಂಬ ಸುದ್ದಿ ಎಲ್ಲರಲ್ಲಿ ನಿಟ್ಟುಸಿರು ಬಿಡುವಂತೆ ಮಾಡಿದೆ.

Previous articleಕೇಂದ್ರದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುವುದರಲ್ಲಿ ಸಂಶಯವಿಲ್ಲ
Next articleವಿಜಯಪುರ-ಮಂಗಳೂರು ಎಕ್ಸ್‌ಪ್ರೆಸ್ ರೈಲು: ಮಂಗಳೂರು ಸೆಂಟ್ರಲ್ ನಿಲ್ದಾಣದವರೆಗೂ ವಿಸ್ತರಣೆ