ಕೊಪ್ಪಳ: ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ವಿದೇಶಿ ಪ್ರವಾಸಿ, ರೆಸಾರ್ಟ್ ಮಾಲೀಕರ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮೂರನೇ ಆರೋಪಿಯನ್ನು ಭಾನುವಾರ ಬಂಧನ ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಕುರಿತು ನಾನು ಮಾಹಿತಿ ಪಡೆದಿದ್ದೇನೆ. ಈ ಕೃತ್ಯ ಆಗಬಾರದಿತ್ತು. ಇದು ನೋವಿನ ಸಂಗತಿ. ನಿನ್ನೆ ಇಬ್ಬರನ್ನು ಬಂಧಿಸಲಾಗಿತ್ತು. ಭಾನುವಾರ ಮತ್ತೊಬ್ಬ ಆರೋಪಿಯನ್ನು ಬಂಧನ ಮಾಡಲಾಗಿದೆ. ಇಲ್ಲಿ ಅಕ್ರಮ ಚಟುವಟಿಕೆ ಬಂದ್ ಮಾಡಿದ್ದೇವೆ. ರಾತ್ರಿ ವೇಳೆ ಪ್ರವಾಸಿಗರು ಹೊರಹೋಗಬಾರದಿತ್ತು. ಸಾಣಾಪುರ ಪ್ರದೇಶ ಅದು ನಿರ್ಜನ ಪ್ರದೇಶವಾಗಿದೆ. ಆ ಪ್ರದೇಶದಲ್ಲಿ ಚಿರತೆ, ಕರಡಿಗಳಿವೆ. ಕ್ಷುಲಕ ಕಾರಣಕ್ಕೆ ಒಬ್ಬರ ಪ್ರಾಣ ಹೋಗಿದೆ. ಇದು ಬಹಳ ನೋವು ಅನಿಸುತ್ತದೆ. ಈ ಭಾಗದಲ್ಲಿ ಪೊಲೀಸ್ ತಂಡ ಹಾಕಲು ಹೇಳಲಾಗಿದೆ. ತಪ್ಪಿತಸ್ಥರ ಮೇಲೆ ಖಂಡಿತವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದರು.