ಸಹಸ್ರಲಿಂಗದಲ್ಲಿ ಸಂಕ್ರಾಂತಿ ಆಚರಣೆ

0
9

ಶಿರಸಿ: ತಾಲೂಕಿನ ಪುರಣ ಪ್ರಸಿದ್ಧ, ಐತಿಹಾಸಿಕ ಪ್ರವಾಸಿ ತಾಣ ಸಹಸ್ರಲಿಂಗಕ್ಕೆ ಮಂಗಳವಾರ ಮಕರ ಸಂಕ್ರಾಂತಿ ಪ್ರಯುಕ್ತ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿ, ಪುಣ್ಯ ಸ್ನಾನ ಮಾಡಿ, ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.
ಪ್ರತಿ ವರ್ಷ, ಮಕರ ಸಂಕ್ರಾಂತಿಯ ಸಂದರ್ಭದಲ್ಲಿ ಸಹಸ್ರಲಿಂಗಕ್ಕೆ ಹಾವೇರಿ, ಹಾನಗಲ್, ದಾವಣಗೆರೆ ಭಾಗಗಳಿಂದ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿ, ಸ್ನಾನ ಮಾಡಿ, ಶಿವಲಿಂಗಕ್ಕೆ ಪೂಜೆ ಸಲ್ಲಿಸುತ್ತಾರೆ. ಈ ವರ್ಷವೂ ಭಕ್ತರು ಪುಣ್ಯಸ್ನಾನ ಮಾಡಿ, ಶಿವಲಿಂಗಗಳಿಗೆ ಪೂಜೆ ನೆರವೇರಿಸಿದರು. ಶಾಲ್ಮಲಾ ನದಿಯಲ್ಲಿ, ಸಹಸ್ರಲಿಂಗದ ಪರಿಸರದಲ್ಲಿ ಅಹಿತಕರ ಘಟನೆ ಸಂಭವಿಸಿದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಬಂದೋಬಸ್ತ ಏರ್ಪಡಿಸಿದ್ದರು.

Previous articleಸಂಸದರ ಮನೆಗೆಯಂಗಳಕ್ಕೆ ಬಂದ ಅಪರೂಪದ ಅತಿಥಿ…!
Next articleಉ.ಕ ದವರು `ಸಿಎಂ’ ಆದರೆ ಸ್ವಾಗತಿಸುವೆ