ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆದ ಸಿ.ಟಿ.ರವಿ

0
17

ಬೆಂಗಳೂರು: ಸವದತ್ತಿಯ ಶಕ್ತಿಪೀಠ ಯಲ್ಲಮ್ಮ ದೇವಿಯ ದರ್ಶನವನ್ನು ಪಡೆದಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಪೋಸ್ಟ್‌ ಮಾಡಿ ಸವದತ್ತಿ ರೇಣುಕಾ ಯಲ್ಲಮ್ಮ ದೇವಿಯ ದರ್ಶನಕ್ಕಾಗಿ ಇಂದು ಶ್ರೀ ಕ್ಷೇತ್ರ ಸವದತ್ತಿಗೆ ಆಗಮಿಸಿದ ನನ್ನನ್ನು ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ್ , ಶಾಸಕ ಮಹೇಶ್ ತೆಂಗಿನಕಾಯಿ, ಮಾಜಿ ಶಾಸಕ ಸಂಜಯ್ ಪಾಟೀಲ್ ಅವರ ನೇತೃತ್ವದಲ್ಲಿ, ಜಿಲ್ಲೆಯ ಪಕ್ಷದ ವಿವಿಧ ನಾಯಕರೊಂದಿಗೆ ಸ್ಥಳೀಯ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದರು ತಾಯಿ ಯಲ್ಲಮ್ಮ ದೇವಿಯ ದರ್ಶನ ಭಾಗ್ಯ ದೊರೆಯಿತು, ಈ ಪಾವನ ಸ್ಥಳಕ್ಕೆ ಭೇಟಿ ನೀಡಿದದಾಗ ಕಾರ್ಯಕರ್ತ ಬಂಧುಗಳೂ ನನ್ನ ಜೊತೆಯಾದರು. ಕಾರ್ಯಕರ್ತ ಬಂಧುಗಳ ಅಮಿತ ಉತ್ಸಾಹ, ಪ್ರೀತಿ, ಹಾಗೂ ಗೌರವ ನನ್ನ ಪಾಲಿಗೆ ಶ್ರೀ ರಕ್ಷೆ. ತಮ್ಮಗಳ ಈ ಅಪರಿಮಿತ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ ಸದಾಕಾಲ ನನ್ನನ್ನು ಸಮಾಜ ಸೇವೆಗೆ ಮತ್ತಷ್ಟು ಪ್ರೇರೇಪಿಸುತ್ತವೆ. ಶ್ರೀ ದೇವಿಯ ಆಶೀರ್ವಾದ ಸದಾ ನಮ್ಮೆಲ್ಲರ ಮೇಲೆ ಇರುತ್ತದೆ ಎಂಬ ವಿಶ್ವಾಸದೊಂದಿಗೆ ಜೊತೆಯಾದ ತಮಗೆಲ್ಲರಿಗೂ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ

Previous articleನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
Next articleಪ್ರವಾಸಿಗರ ಮೇಲೆ ಹಲ್ಲೆ ಪ್ರಕರಣ: ಯುವಕನ ಮೃತದೇಹ ಪತ್ತೆ