ರಾಯಚೂರು: ಏಳು ಜನರಿಂದ ಕಟ್ಟಿಗೆ, ರಾಡ್ ಗಳಿಂದ ಹಲ್ಲೆ ಮಾಡಿ ವ್ಯಕ್ತಿಯ ಕೊಲೆ ಮಾಡಿದ ಘಟನೆ ಸಿರವಾರ ತಾಲೂಕಿನ ಸೊಸೈಟಿ ಕ್ಯಾಂಪಿನಲ್ಲಿ ಘಟನೆ ನಡೆದಿದೆ.
ಗ್ರಾಮದ ರಾಜಪ್ಪ (41) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.
ಹುಚ್ಚಪ್ಪ, ಸಿದ್ದಪ್ಪ, ಶಿವಪ್ಪ, ಪ್ರವೀಣ, ಬಾಲಸ್ವಾಮಿ, ಸುನೀಲ, ಮಾನಪ್ಪ ಎಂಬುವವರಿಂದ ಕೊಲೆ ನಡೆದಿದೆ ಎಂಬ ಆರೋಪವಾಗಿದೆ.
ಜಮೀನನ ಕೆಲಸಕ್ಕೆ ತೆರಳುವಾಗ ಆರೋಪಿ ಹುಚ್ಚಪ್ಪನ ಹೆಂಡತಿಯೊಂದಿಗೆ ಸಲುಗೆಯಿಂದ ಕೊಲೆಯಾದ ರಾಜಪ್ಪ ಮಾತನಾಡುತ್ತಿದ್ದ
ಈ ಕಾರಣವನ್ನು ನೆಪಮಾಡಿ ಹುಚ್ಚಪ್ಪ ಹಾಗೂ ಸಹಚರರು ಕಟ್ಟಿಗೆ ಹಾಗೂ ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಿದ್ದರು.
ಹಲ್ಲೆಗೊಳಗಾದ ರಾಜಪ್ಪ ರಾಯಚೂರು ನಗರದ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು.
ಚಿಕಿತ್ಸೆಫಲಕಾರಿಯಾಗದೆ ಆಸ್ಪತ್ರೆಯಲ್ಲಿ ರಾಜಪ್ಪ ಸಾವನ್ನಪ್ಫಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಯ ಹೆಂಡತಿ ಮೋನಮ್ಮ ಅವರು7 ಜನರ ವಿರುದ್ಧ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ
ಈಗಾಗಲೇ ನಾಲ್ವರು ಆರೋಪಿಗಳನ್ನು ಪೊಲೀಸರು ಬಂದಿಸಿದ್ದಾರೆ.
ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.