ಸರ್ಪ ಸಂಸ್ಕಾರ – ಹೆಚ್ಚಿನ ದಕ್ಷಿಣೆಗೆ ಬೇಡಿಕೆ: ಆರ್ಚಕ ಅಮಾನತು

0
27

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ ನಡೆಸಿದ ವೇಳೆ ಭಕ್ತರಿಂದ ಹೆಚ್ಚಿನ ದಕ್ಷಿಣೆಗೆ ಬೇಡಿಕೆ ಇಟ್ಟ ಆರೋಪದ ಮೇಲೆ ಅರ್ಚಕರೊಬ್ಬರನ್ನು ಅಮಾನತುಗೊಳಿಸಲಾಗಿದೆ.


ಶಿವ ಪ್ರಕಾಶ್ ಪಾಂಡೇಲು ಅಮಾನತುಗೊಂಡಿರುವ ಅರ್ಚಕ.ಇತ್ತೀಚಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಂಧ್ರಪ್ರದೇಶದ ಭಕ್ತರ ತಂಡವೊಂದು ಭೇಟಿ ನೀಡಿ ಸರ್ಪ ಸಂಸ್ಕಾರ ಸೇವೆ ಮಾಡಿಸಿಕೊಂಡಿದ್ದಾರೆ, ಸೇವೆ ಮುಗಿದ ಬಳಿಕ ಭಕ್ತರು ತಮ್ಮ ಇಷ್ಟಾರ್ಥ ದಕ್ಷಿಣೆಯನ್ನೂ ಅರ್ಚಕರಿಗೆ ನೀಡಿದ್ದಾರೆ ಆದರೆ ನೀಡಿರುವ ದಕ್ಷಿಣೆ ಕಡಿಮೆಯಾಯಿತೆಂದು ಸಿಟ್ಟಿಗೆದ್ದ ಅರ್ಚಕ ಭಕ್ತರು ನೀಡಿದ ದಕ್ಷಿಣೆಯ ಹರಿವಾಣವನ್ನು ದೂರ ತಳ್ಳಿದ್ದಾರೆ, ಇದರಿಂದ ಮನನೊಂದ ಭಕ್ತರು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದಾರೆ. ಇತ್ತ ದೂರು ಸ್ವೀಕರಿಸಿದ ಅಧಿಕಾರಿಗಳು ಅರ್ಚಕರ ವಿರುದ್ಧ ಈ ಹಿಂದೆಯೂ ಇಂತಹ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿದ್ದಾರೆ.

Previous articleತುಂಗಭದ್ರಾ ನದಿಯಲ್ಲಿ ಮೊಸಳೆ ಪ್ರತ್ಯಕ್ಷ
Next articleವರಮಹಾಲಕ್ಷ್ಮೀ ಪೂಜೆ ಸಡಗರ